Bigg Boss Kannada 12: ಮತ್ತೆ ಬಂತು ಬಿಗ್ಬಾಸ್: ಈ ಸಲ ಕಿಚ್ಚು ಹೆಚ್ಚು
Bigg Boss Kannada season 12: ಕಲರ್ಸ್ ಕನ್ನಡ ವಾಹಿನಿಯ ಈ ಸೀಸನ್ನ ಮೊದಲ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ‘ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್’ ಎಂಬ ಸಾಲುಗಳೊಟ್ಟಿಗೆ ಹೊಸ ಬಿಗ್ಬಾಸ್ನ ಟೈಟಲ್ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ಬಾಸ್ ಲೋಗೊನ ರಿವೀಲ್ ಮಾತ್ರವೇ ಇದೆ. ಪ್ರೋಮೊನಲ್ಲಿ ಸುದೀಪ್ ಕಾಣುತ್ತಿಲ್ಲ.

ಬಿಗ್ಬಾಸ್ (Bigg Boss) ಸೀಸನ್ ಮತ್ತೆ ಆರಂಭವಾಗಿದೆ. ಮಲಯಾಳಂನಲ್ಲಿ ಈಗಾಗಲೇ ಬಿಗ್ಬಾಸ್ ರಿಯಾಲಿಟಿ ಶೋ ಆರಂಭವಾಗಿದೆ. ಹಿಂದಿಯಲ್ಲಿ ಸಹ ಇದೇ ತಿಂಗಳ ಅಂತ್ಯಕ್ಕೆ ಆರಂಭ ಆಗಲಿದೆ ಎನ್ನಲಾಗುತ್ತಿದೆ. ನೆರೆಯ ತೆಲುಗಿನಲ್ಲೂ ಬಿಗ್ಬಾಸ್ ಶೋ ಪ್ರಾರಂಭವಾಗುವ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಕನ್ನಡದಲ್ಲಿಯೂ ಸಹ ಬಿಗ್ಬಾಸ್ ಹೊಸ ಸೀಸನ್ನ ಅಪ್ಡೇಟ್ ಒಂದು ದೊರೆತಿದೆ.
ಕಲರ್ಸ್ ಕನ್ನಡ ವಾಹಿನಿಯ ಈ ಸೀಸನ್ನ ಮೊದಲ ಪ್ರೋಮೊ ಒಂದನ್ನು ಬಿಡುಗಡೆ ಮಾಡಿದೆ. ‘ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್’ ಎಂಬ ಸಾಲುಗಳೊಟ್ಟಿಗೆ ಹೊಸ ಬಿಗ್ಬಾಸ್ನ ಟೈಟಲ್ ಪ್ರೋಮೋ ಬಿಡುಗಡೆ ಮಾಡಿದೆ. ಇದರಲ್ಲಿ ಬಿಗ್ಬಾಸ್ ಲೋಗೊನ ರಿವೀಲ್ ಮಾತ್ರವೇ ಇದೆ. ಪ್ರೋಮೊನಲ್ಲಿ ಸುದೀಪ್ ಕಾಣುತ್ತಿಲ್ಲ. ‘ಕಾದಿದ್ದು ಸಾಕು, ಬಿಗ್ಬಾಸ್ ಈಸ್ ಬ್ಯಾಕ್’ ಜೊತೆಗೆ ‘ಈ ಸಲ ಕಿಚ್ಚು ಮಾತ್ರ ಹೆಚ್ಚು’ ಎಂಬ ಧ್ಯೇಯ ವಾಕ್ಯವನ್ನೂ ಸೇರಿಸಲಾಗಿದೆ.
View this post on Instagram
ಈ ಬಾರಿ ಬಿಗ್ಬಾಸ್ ಸೀಸನ್ 12 ನಡೆಯಲಿದ್ದು, ಈ ಸೀಸನ್ ಅನ್ನು ಸುದೀಪ್ ಅವರೇ ನಿರೂಪಣೆ ಮಾಡಲಿದ್ದಾರೆ. ಸೀಸನ್ 11ರ ವೇಳೆ, ತಾವು ಇನ್ನು ಮುಂದೆ ಬಿಗ್ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಹೇಳಿದ್ದರು. ಆದರೆ ಆಯೋಜಕರು ಸುದೀಪ್ ಅವರ ಮನವೊಲಿಸಿ ಸುದೀಪ್ ಅವರನ್ನು ಮತ್ತೆ ನಿರೂಪಕರನ್ನಾಗಿ ಮುಂದುವರೆಯುವಂತೆ ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಸುದೀಪ್ ಅವರು ಪ್ರೋಮೊ ಶೂಟ್ನಲ್ಲಿ ಭಾಗಿ ಆಗಲಿದ್ದಾರೆ.
ಇದನ್ನೂ ಓದಿ:ಕಿರುತೆರೆಯಲ್ಲಿ ಉಗ್ರಂ ಮಂಜು: ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿಗೆ ಬಂದ ನಟ
ಈಗ ಬಿಡುಗಡೆ ಆಗಿರುವ ಬಿಗ್ಬಾಸ್ ಪ್ರೋಮೋನಲ್ಲಿ ಬಿಗ್ಬಾಸ್ ಲೋಗೊ ತುಸು ಭಿನ್ನವಾಗಿದೆ. ಚಿನ್ನದ ಬಣ್ಣದ ಅಂಚು ಅದರೊಳಗೆ ವಜ್ರಗಳ ರೀತಿ ಕಾಣುವಂತೆ ಡಿಸೈನ್ ಮಾಡಲಾಗಿದೆ. ಬಿಗ್ಬಾಸ್ನ ಲೋಗೊದ ಮಧ್ಯ ಭಾಗದಲ್ಲಿ ಗಡಿಯಾರವೊಂದು ಕಾಣುತ್ತದೆ. ಪ್ರೋಮೊ ಬಿಡುಗಡೆ ಆಗುತ್ತಿದ್ದಂತೆ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನ ಪ್ರೋಮೋ ನೋಡಿದ್ದಾರೆ. ಶೇರ್ ಮತ್ತು ಕಮೆಂಟುಗಳನ್ನು ಸಹ ಮಾಡಿದ್ದಾರೆ.
ಇನ್ನು ಈ ಬಾರಿಯೂ ಸಹ ಕಿರುತೆರೆ, ಸಾಮಾಜಿಕ ಜಾಲತಾಣ ಹಾಗೂ ಸಿನಿಮಾ ಕ್ಷೇತ್ರದ ಜನಪ್ರಿಯರನ್ನು ಬಿಗ್ಬಾಸ್ ಮನೆಗೆ ಕರೆತರಲಾಗುತ್ತಿದೆ. ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ನಿಜವಾಗಿಯೂ ಈ ಬಾರಿ ಯಾರು ಮನೆಯ ಒಳಗೆ ಹೋಗುತ್ತಿದ್ದಾರೆ ಎಂಬುದು ಈ ವರೆಗೆ ಖಾತ್ರಿ ಆಗಿಲ್ಲ. ಪ್ರಸ್ತುತ ಟೈಟಲ್ ರಿವೀಲ್ ಪ್ರೋಮೊ ಮಾತ್ರವೇ ಬಿಡುಗಡೆ ಆಗಿದ್ದು, ಇನ್ನು ಕೆಲ ದಿನಗಳಲ್ಲಿ ಸುದೀಪ್ ಅವರಿರುವ ಪ್ರೋಮೊ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Fri, 15 August 25




