AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ರಾಜ್ ಬಿ. ಶೆಟ್ಟಿ; ಕಾರಣ ಏನು?

ರಾಜ್ ಬಿ ಶೆಟ್ಟಿ ಅವರ 'ಸು ಫ್ರಮ್ ಸೋ' ಚಿತ್ರ ಅಪಾರ ಯಶಸ್ಸು ಕಂಡಿದೆ. ಈ ಯಶಸ್ಸಿನ ನಂತರ, ಅವರು ಸೋಷಿಯಲ್ ಮೀಡಿಯಾ ಬಳಕೆಯಿಂದ ವಿರಾಮ ತೆಗೆದುಕೊಂಡಿದ್ದಾರೆ.ಅವರ ತಂಡ ಸೋಷಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಿಸಲಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ರಾಜ್ ಬಿ. ಶೆಟ್ಟಿ; ಕಾರಣ ಏನು?
ರಾಜ್
ರಾಜೇಶ್ ದುಗ್ಗುಮನೆ
| Updated By: Digi Tech Desk|

Updated on:Sep 05, 2025 | 3:27 PM

Share

ರಾಜ್ ಬಿ. ಶೆಟ್ಟಿ (Raj B Shetty) ಅವರು ‘ಸು ಫ್ರಮ್ ಸೋ’ ಚಿತ್ರದಿಂದ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಅವರನ್ನು ಪರಭಾಷೆಗೂ ಕರೆದುಕೊಂಡು ಹೋಯಿತು. ಅಲ್ಲಿಯೂ ಸಿನಿಮಾ ಉತ್ತಮ ಗಳಿಕೆ ಮಾಡಿದೆ. ಹೀಗಿರುವಾಗಲೇ ರಾಜ್ ಅವರು ಸೋಶಿಯಲ್ ಮೀಡಿಯಾ​ಗೆ ಗುಡ್ ಬೈ ಹೇಳಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ಕೂಡ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಾಜ್ ಬಿ ಶೆಟ್ಟಿ ನಿರ್ಮಿಸಿ, ನಟಿಸಿರೋ ‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆಯಿತು. ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಿನಿಮಾ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಪರಭಾಷೆಯ ಮಂದಿಯ ಮೆಚ್ಚುಗೆಯನ್ನೂ ಪಡೆದಿದೆ. ತಮಿಳು ಹಾಗೂ ಹಿಂದಿ ಭಾಷೆಗೆ ರಿಮೇಕ್ ಹಕ್ಕು ಮಾರಾಟ ಆಗಿದೆ.

ಇದನ್ನೂ ಓದಿ
Image
ಧೂಳೆಬ್ಬಿಸಿದ ರಾಜ್ ಹಂಚಿಕೆ ಮಾಡ್ತಿರೋ ‘ಲೋಕಃ’ ಸಿನಿಮಾ; 9.5 ರೇಟಿಂಗ್
Image
ಅನುಶ್ರೀ ಮದುವೆಯಲ್ಲಿ ‘ಬಾವ ಬಂದರು’ ಎಂದು ರೋಷನ್ ಕಾಲೆಳೆದ ರಾಜ್ ಬಿ. ಶೆಟ್ಟಿ
Image
ಅಪರೂಪದಲ್ಲೇ ಅಪರೂಪದ ಫೋಟೋ ಹಂಚಿಕೊಂಡ ರಾಜ್ ಬಿ. ಶೆಟ್ಟಿ; ಇದರ ವಿಶೇಷತೆ ಏನು?
Image
Bigg Boss ಟೈಟಲ್​ನಲ್ಲಿ ಹೆಚ್ಚುವರಿ G ಏಕೆ? ಸಂಖ್ಯಾಶಾಸ್ತ್ರದ ಲೆಕ್ಕಾಚಾರ

ಈಗ ರಾಜ್ ಅವರು ತಮ್ಮ ಮುಂದಿನ ಸಿನಿಮಾ ಕೆಲಸಗಳ ಮೇಲೆ ಗಮನ ಹರಿಸುವವರಿದ್ದಾರೆ. ಕೆಲಸದ ಮೇಲೆ ಗಮನ ಹರಿಸಬೇಕಿರುವ ಕಾರಣದಿಂದ ಅವರು ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಿಲ್ಲ. ಹಾಗಂತ ಅದರಲ್ಲಿ ಯಾವುದೇ ಪೋಸ್ಟ್​ಗಳು ಬರೋದಿಲ್ಲ ಎಂದರ್ಥವಲ್ಲ. ರಾಜ್ ಅವರ ತಂಡದವರು ಸೋಶಿಯಲ್ ಮೀಡಿಯಾ​ನ ಹ್ಯಾಂಡಲ್ ಮಾಡಲಿದ್ದಾರೆ. ಮತ್ತೆ ಸಿನಿಮಾ ಪ್ರಚಾರದ ವೇಳೆ ಇದನ್ನು ಅವರು ಬಳಕೆ ಮಾಡಲಿದ್ದಾರೆ.

ರಾಜ್ ಬಿ ಶೆಟ್ಟಿ ಪೋಸ್ಟ್

View this post on Instagram

A post shared by Raj B Shetty (@rajbshetty)

ರಾಜ್ ಅವರು ಒಂದು ಥ್ರಿಲ್ಲರ್ ಕಥೆಯನ್ನು ಬರೆಯುತ್ತಿರುವುದಾಗಿ ಈ ಮೊದಲು ಹೇಳಿದ್ದರು. ಅದೇ ಚಿತ್ರದ ಮೇಲೆ ಅವರು ಗಮನ ಹರಿಸುವ ಸಾಧ್ಯತೆ ಇದೆ. ಮತ್ತೆ ಅವರಿಂದ ಹಾಸ್ಯದ ಕಥೆ ನಿರೀಕ್ಷೆ ಮಾಡಬಾರದು ಎಂದು ಈ ಮೊದಲೇ ಹೇಳಿದ್ದಾರೆ. ಅವರು ನಾನಾ ರೀತಿಯ ಸಿನಿಮಾಗಳನ್ನು ನೀಡುವ ಉದ್ದೇಶ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಧೂಳೆಬ್ಬಿಸಿದ ರಾಜ್ ಬಿ. ಶೆಟ್ಟಿ ಹಂಚಿಕೆ ಮಾಡ್ತಿರೋ ‘ಲೋಕಃ’ ಸಿನಿಮಾ; 9.5 ರೇಟಿಂಗ್

ರಾಜ್ ಅವರು ಕರ್ನಾಟಕದಲ್ಲಿ ಹಂಚಿಕೆ ಮಾಡುತ್ತಿರುವ ಮಲಯಾಳಂನ ‘ಲೋಕಃ’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ಈಗಾಗಲೇ 2 ದಿನಕ್ಕೆ 6.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Sat, 30 August 25