AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದಲ್ಲೇ ಅಪರೂಪದ ಫೋಟೋ ಹಂಚಿಕೊಂಡ ರಾಜ್ ಬಿ. ಶೆಟ್ಟಿ; ಇದರ ವಿಶೇಷತೆ ಏನು?

ರಾಜ್ ಬಿ. ಶೆಟ್ಟಿ ಅವರು ತಮ್ಮ ತಾಯಿ ಮತ್ತು ಅವರ ಪ್ರೀತಿಯ ನಾಯಿ ಲಕ್ಷ್ಮಿ ಜೊತೆಗಿನ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ಅವರ ಕುಟುಂಬ ಮತ್ತು ಸಾಕುಪ್ರಾಣಿಗಳ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಫೋಟೋ ಭಾರೀ ಸಂಖ್ಯೆಯ ಲೈಕ್ಸ್ ಗಳನ್ನು ಪಡೆದಿದೆ. ಈ ಫೋಟೋದಲ್ಲಿ ಅವರ ಸಂತೋಷ ಮತ್ತು ಕುಟುಂಬದ ಬಾಂಧವ್ಯವನ್ನು ಸ್ಪಷ್ಟವಾಗಿ ಕಾಣಬಹುದು.

ಅಪರೂಪದಲ್ಲೇ ಅಪರೂಪದ ಫೋಟೋ ಹಂಚಿಕೊಂಡ ರಾಜ್ ಬಿ. ಶೆಟ್ಟಿ; ಇದರ ವಿಶೇಷತೆ ಏನು?
ರಾಜ್ ಬಿ ಶೆಟ್ಟಿ
ರಾಜೇಶ್ ದುಗ್ಗುಮನೆ
|

Updated on: Aug 29, 2025 | 6:57 AM

Share

‘ಸು ಫ್ರಮ್ ಸೋ’ ಮೂಲಕ ರಾಜ್ ಬಿ. ಶೆಟ್ಟಿ (Raj B Shetty) ಅವರು ಪರಭಾಷೆಯವರಿಗೂ ಪರಿಚಯ ಆದರು. ಕನ್ನಡದಲ್ಲಿ ಈ ರೀತಿಯ ಭಿನ್ನ ಸಿನಿಮಾಗಳನ್ನು ಕೂಡ ನೀಡಲಾಗುತ್ತದೆ ಎಂಬುದನ್ನು ತೋರಿಸಿಕೊಟ್ಟರು. ರಾಜ್ ಬಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗಾಗಿ ವಿವಿಧ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಈಗ ಅವರು ಅಪರೂಪದಲ್ಲೇ ಅಪರೂಪದಲ್ಲೇ ಅಪರೂಪದ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗಳಿ ಭರ್ಜರಿ ಲೈಕ್ಸ್ ಸಿಕ್ಕಿದೆ.

ಈ ಫೋಟೋದಲ್ಲಿ ಇರೋದು ರಾಜ್ ಬಿ ಶೆಟ್ಟಿ ತಾಯಿ, ಮತ್ತೊಂದು ರಾಜ್ ಶೆಟ್ಟಿ ಅವರ ಪ್ರೀತಿಯ ಶ್ವಾನ ಲಕ್ಷ್ಮಿ. ಅವರಿಗೆ ಕುಟುಂಬ ಹಾಗೂ ಶ್ವಾನಗಳ ಮೇಲೆ ವಿಶೇಷ ಪ್ರೀತಿ. ಇಬ್ಬರೂ ಒಂದೇ ಕಡೆ ಇರುವುದರಿಂದ ಈ ಫೋಟೋ ಸ್ಪೆಷಲ್ ಎನಿಸಿಕೊಂಡಿದೆ. ಹೀಗಾಗಿ, ಅವರು ಈ ಫೋಟೋಗೆ ಅದೇ ರೀತಿಯ ಕ್ಯಾಪ್ಶನ್ ನೀಡಿದ್ದಾರೆ.

ಇದನ್ನೂ ಓದಿ
Image
Bigg Boss ಟೈಟಲ್​ನಲ್ಲಿ ಹೆಚ್ಚುವರಿ G ಏಕೆ? ಸಂಖ್ಯಾಶಾಸ್ತ್ರದ ಲೆಕ್ಕಾಚಾರ
Image
ಇಂದು ಆ್ಯಂಕರ್ ಅನುಶ್ರೀ ಮದುವೆ; ಮುಹೂರ್ತ, ವಿವಾಹದ ಬಗ್ಗೆ ಇಲ್ಲಿದೆ ವಿವರ
Image
KGF ಚಾಚಾಗೆ ಕ್ಯಾನ್ಸರ್ ಎಂದಾಗ ಯಶ್ ಪ್ರತಿಕ್ರಿಯೆ ಏನು? ಊಹೆಗೂ ಮೀರಿದ್ದು
Image
ಹರೀಶ್ ರಾಯ್ ಪರಿಸ್ಥಿತಿ ನೋಡಿ; ಸಹಾಯಕ್ಕಾಗಿ ಅಂಗಲಾಚಿದ ‘ಕೆಜಿಎಫ್’ ಚಾಚಾ

ರಾಜ್ ಬಿ ಶೆಟ್ಟಿ ಪೋಸ್ಟ್

View this post on Instagram

A post shared by Raj B Shetty (@rajbshetty)

‘ಅಮ್ಮ, ಲಕ್ಷ್ಮಿಯಮ್ಮ (ಶ್ವಾನ) ಹಾಗೂ ನಾನು. ಇದು ನನ್ನ ಫೇವರಿಟ್ ಫೋಟೋ’ ಎಂದು ರಾಜ್ ಬಿ ಶೆಟ್ಟಿ ಬರೆದುಕೊಂಡಿದ್ದಾರೆ. ರಾಜ್ ಅವರು ಹಲವು ದೇಶಿಯ ತಳಿಯ ನಾಯಿಯನ್ನು ಸಾಕಿದ್ದಾರೆ. ಈ ಶ್ವಾನಗಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಅದರಲ್ಲೂ ಲಕ್ಷ್ಮಿ ಶ್ವಾನ ಅವರ ಫೇವರಿಟ್​​ ಶ್ವಾನಗಳಲ್ಲಿ ಒಂದು. ಅದರ ಜೊತೆ ಇದ್ದಾಗ ಅವರಿಗೆ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲವಂತೆ. ಈ ಕಾರಣದಿಂದಲೇ ಫೋಟೋದಲ್ಲಿ ಅವರು ಅಷ್ಟೊಂದು ನಗುತ್ತಿದ್ದಾರೆ.

ಇದನ್ನೂ ಓದಿ: ಅನುಶ್ರೀ ಮದುವೆಗೆ ಬಂದ ‘ಬಾವ’; ಇಲ್ಲಿದೆ ವಿವಾಹದ ಸುಂದರ ಫೋಟೋಸ್

ರಾಜ್ ಅವರು ಭದ್ರಾವತಿಯವರು. ಆದರೆ, ಅವರು ನಂತರ ಮಂಗಳೂರಿಗೆ ಶಿಫ್ಟ್ ಆಗಬೇಕಾಯಿತು. ಈಗ ಮಂಗಳೂರೇ ಅವರ ಊರಾಗಿದೆ. ಸಿನಿಮಾ ಕೆಲಸದ ಸಂದರ್ಭಗಳಲ್ಲಿ ಬೆಂಗಳೂರಲ್ಲಿ ಅವರು ನೆಲೆಸುತ್ತಾರೆ. ವಿವಿಧ ರೀತಿಯ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಪರಭಾಷೆಯ ಚಿತ್ರಗಳನ್ನು ಅವರು ಇಲ್ಲಿ ಹಂಚಿಕೆ ಕೂಡ ಮಾಡಿದ್ದಾರೆ. ‘ಲೋಕಃ’ ಸಿನಿಮಾ ಆಗಸ್ಟ್ 28ರಂದು ಬಿಡುಗಡೆ ಕಂಡಿದೆ. ಮಲಯಾಳಂನಲ್ಲಿ ಇದನ್ನು ದುಲ್ಖರ್ ಸಲ್ಮಾನ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ಕರ್ನಾಟಕದಲ್ಲಿ ರಾಜ್​ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ಸ್ ಹಂಚಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.