ಸಖತ್ ಗಮ್ಮತ್ತು; ಅನುಶ್ರೀ ಮದುವೆಯಲ್ಲಿ ‘ಬಾವ ಬಂದರು’ ಎಂದು ರೋಷನ್ ಕಾಲೆಳೆದ ರಾಜ್ ಬಿ. ಶೆಟ್ಟಿ
ರಾಜ್ ಬಿ ಶೆಟ್ಟಿ ಅವರು ಆ್ಯಂಕರ್ ಅನುಶ್ರೀ ರೋಷನ್ ಅವರ ಮದುವೆಗೆ ಹಾಜರಿ ಹಾಕಿದ್ದರು. ಅವರ ನೃತ್ಯ ಹಾಗೂ ಮೋಜಿನ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವೇಳೆ ‘ಬಾವ ಬಂದರೋ’ ಹಾಡನ್ನು ಹಾಡಿದ್ದು ವಿಶೇಷ. ರಾಜ್ ಮತ್ತು ಅನುಶ್ರೀಯವರ ನಡುವಿನ ಉತ್ತಮ ಗೆಳೆತನವನ್ನು ಈ ವಿಡಿಯೋ ತೋರಿಸಿದೆ.

ರಾಜ್ ಬಿ. ಶೆಟ್ಟಿ (Raj B Shetty) ಹಾಗೂ ಅನುಶ್ರೀ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇಬ್ಬರೂ ಮಂಗಳೂರು ಮೂಲದವರು. ಹೀಗಾಗಿ ಇವರ ಮಧ್ಯೆ ಒಳ್ಳೆಯ ಕನೆಕ್ಷನ್ ಬೆಳೆದಿದೆ. ಅನುಶ್ರೀ ಹಾಗೂ ರೋಷನ್ ವಿವಾಹಕ್ಕೆ ರಾಜ್ ಬಿ ಶೆಟ್ಟಿ ಅವರು ಆಗಮಿಸಿದ್ದರು. ಈ ವೇಳೆ ವಿವಿಧ ರೀತಿಯ ಸ್ಟೆಪ್ ಹಾಕಿದ್ದಾರೆ. ಅಲ್ಲದೆ, ಮಂಟಪದೊಳಗೆ ‘ಬಾವ ಬಂದರೋ’ ಹಾಡನ್ನು ಹಾಡಿ ರಾಜ್ ಅವರು ರೋಷನ್ ಕಾಲೆಳೆದಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಎಲ್ಲರೂ ಇದನ್ನು ಇಷ್ಟಪಟ್ಟಿದ್ದಾರೆ.
ರಾಜ್ ಅವರು ತುಂಬಾನೇ ಗಂಭೀರ ಸ್ವಭಾವದವರಲ್ಲ. ಅವರ ಗಂಭೀರತೆ ಕೇವಲ ಕೆಲಸದ ಮೇಲೆ ಮಾತ್ರ. ನಿಜ ಜೀವನದಲ್ಲಿ ಅವರು ಸಖಥ್ ಫನ್. ಅನುಶ್ರೀ ಕೂಡ ಇದೇ ಮನಸ್ಥಿತಿ ಹೊಂದಿದ್ದಾರೆ. ಇವರು ಒಟ್ಟಿಗೆ ಸೇರಿದರೆ ಅಲ್ಲಿ ನಗುವಿನ ಹೊಳೆ ಗ್ಯಾರಂಟಿ. ಇದು ಅನೇಕ ಬಾರಿ ಸಾಬೀತಾಗಿದೆ. ಆ್ಯಂಕರ್ ಅನುಶ್ರೀ ಮದುವೆಯಲ್ಲೂ ಇದು ಮುಂದುವರಿದಿದೆ.
ರಾಜ್ ಅವರು ಅನುಶ್ರೀ ಮದುವೆಯಲ್ಲಿ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಅದೇ ರೀತಿ ಅವರು ಮದುವೆಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ‘ಮೀಡಿಯಾ ಕಿಂಗ್’ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ರಾಜ್ ಅವರು ರೋಷನ್ ಜೊತೆ ಚೆನ್ನಾಗಿ ಬೆರೆತಿದ್ದಾರೆ.
View this post on Instagram
ರೋಷನ್ ಮಾಧ್ಯಮಗಳ ಎದುರು ಬಂದಾಗ ಅಷ್ಟಾಗಿ ಮಾತನಾಡಿಲ್ಲ. ಇದಕ್ಕೆ ಇನ್ನೂ ಕೆಲ ಸಮಯ ಹಿಡಿಯಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಅವರು ವಿವಾಹ ಮಂಟಪದಲ್ಲಿ ರಾಜ್ ಜೊತೆ ಚೆನ್ನಾಗಿ ಬೆರೆತಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾದ ‘ಬಾವ ಬಂದರೋ’ ಹಾಡನ್ನು ರಾಜ್ ಜೊತೆ ಅವರು ಕೂಡ ಹಾಡಿದ್ದಾರೆ ಅನ್ನೋದು ವಿಶೇಷ.
ಇದನ್ನೂ ಓದಿ: ಅಪರೂಪದಲ್ಲೇ ಅಪರೂಪದ ಫೋಟೋ ಹಂಚಿಕೊಂಡ ರಾಜ್ ಬಿ. ಶೆಟ್ಟಿ; ಇದರ ವಿಶೇಷತೆ ಏನು?
ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ರೋಷನ್ ಮದುವೆ ಅದ್ದೂರಿಯಾಗಿ ನೆರವೇರಿದೆ. ಈ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಕುಟುಂಬದವರು, ಆಪ್ತರು ಮಾತ್ರ ಮದುವೆಗೆ ಬಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








