‘ಯಶ್ ಬಂದಾಗ ಇಡೀ ‘ಟಾಕ್ಸಿಕ್’ ಸೆಟ್ ಸೈಲೆಂಟ್ ಆಗುತ್ತೆ’; ಬಾಲಿವುಡ್ ನಟ ಅಕ್ಷಯ್ ಅಪರೂಪದ ಹೇಳಿಕೆ
ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಅವರು 'ಟಾಕ್ಸಿಕ್' ಚಿತ್ರದ ಸೆಟ್‌ನಲ್ಲಿ ಯಶ್ ಅವರೊಂದಿಗಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಯಶ್ ಅವರ ಲುಕ್, ಸೆಟ್‌ನಲ್ಲಿ ಅವರ ಉಪಸ್ಥಿತಿಯಿಂದ ಉಂಟಾಗುವ ಮೌನವನ್ನು ಅವರು ಪ್ರಶಂಸಿಸಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, 2026ರ ಮಾರ್ಚ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ನಟ ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಕನ್ನಡದಿಂದ ಜರ್ನಿ ಆರಂಭಿಸಿದ ಅವರು ಈಗ ಹಾಲಿವುಡ್ವರೆಗೆ ತಮ್ಮ ಹೆಸರನ್ನು ಪಸರಿಸಿಕೊಂಡಿದ್ದಾರೆ. ಸದ್ಯ ಅವರು ‘ಟಾಕ್ಸಿಕ್’ ಸಿನಿಮಾ (Toxic Movie) ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಿರುವಾಗಲೇ ಯಶ್ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸೆಟ್ನ ಅನುಭವಗಳನ್ನು ಅವರು ತೆರೆದಿಟ್ಟಿದ್ದಾರೆ.
ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರು ಈ ಚಿತ್ರದ ನಿರ್ಮಾಪಕ ಕೂಡ ಹೌದು. ಈ ಚಿತ್ರದಲ್ಲಿ ಬಾಲಿವುಡ್ ಯುವ ನಟ ಅಕ್ಷಯ್ ಒಬೆರಾಯ್ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಮೂಡಿ ಬರುತ್ತಿದೆ. ಎರಡೂ ಭಾಷೆಯಲ್ಲಿ ಡೈಲಾಗ್ ಹೇಳಬೇಕಿದೆ. ಅಕ್ಷಯ್ ಅವರು ಈ ಚಿತ್ರಕ್ಕಾಗಿ ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಅಕ್ಷಯ್ ಅವರು ಈಗ ಯಶ್ ಬಗ್ಗೆ ಮಾತನಾಡಿದ್ದಾರೆ. ಯಶ್ ಸಖತ್ ಹ್ಯಾಂಡ್ಸಮ್ ಆಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇಡೀ ಸೆಟ್ ಅವರು ಬಂದಾಗ ಸೈಲೆಂಟ್ ಆಗುತ್ತದೆ ಎಂಬುದನ್ನು ಕೂಡ ವಿವರಿಸಿದ್ದಾರೆ. ‘ಅಂದು ಯಶ್ ಜನ್ಮದಿನ. ಅವರು ಟಾಕ್ಸಿಕ್ ಸಿನಿಮಾ ಸೆಟ್ನಿಂದ ಹೊರಕ್ಕೆ ಬರುತ್ತಿದ್ದರು. ಸೂಟ್ ಧರಿಸಿದ್ದು, ಬಿಳಿ ಬಣ್ಣ ಟೋಪಿ ಹಾಕಿದ್ದರು. ನಾನು ಅವರನ್ನು ಮೊದಲ ಬಾರಿಗೆ ನೋಡಿದ್ದು ಆಗಲೇ. ಅವರು ನಿಜಕ್ಕೂ ಗುಡ್ ಲುಕಿಂಗ್ ವ್ಯಕ್ತಿ’ ಎಂದಿದ್ದಾರೆ ಅಕ್ಷಯ್.
ಯಶ್ ಬಗ್ಗೆ ಅಕ್ಷಯ್ ಹೇಳಿದ ಮಾತು
“Akshay Oberoi on #Yash‘s stunning birthday peek of #ToxicTheMovie : ‘Wearing a white suit and hat, his handsome beard and eyes left me starstruck 😯 as the set went silent 🤐 for this great actor!'” 🔥 #YashBOSS ‘s AURA #Ramayana pic.twitter.com/m2YVmCfzLU
— Risen (@Risen25044984) August 27, 2025
‘ನನ್ನ ಶಾಟ್ ಪೂರ್ಣಗೊಂಡಿತು. ಆ ಬಳಿಕ ಯಶ್ ಬಂದರು. ಅವರು ಬರುತ್ತಿದ್ದಂತೆ ಇಡೀ ಸೆಟ್ ಸೈಲೆಂಟ್ ಆಗುತ್ತದೆ. ಇಂತಹ ಅದ್ಭುತ ನಟ ಬರುತ್ತಿದ್ದಾನೆ ಎಂದಾಗ ಸೆಟ್ ಸೈಲೆಂಟ್ ಆಗಲೇಬೇಕು. ಅವರು ನಿಜಕ್ಕೂ ಒಳ್ಳೆಯ ಲುಕ್ ಹೊಂದಿರೋ ವ್ಯಕ್ತಿ. ಅವರ ಆಲೋಚೆನಗಳು ನಿಜಕ್ಕೂ ಅದ್ಭುತವಾಗಿದೆ’ ಎಂದು ಅಕ್ಷಯ್ ಹೇಳಿದ್ದಾರೆ.
ಇದನ್ನೂ ಓದಿ: ಯಶ್ ಕೆಲಸದ ಶೈಲಿ, ಮಾನವೀಯತೆ ನೋಡಿ ದಂಗಾದ ಬಾಲಿವುಡ್ ನಟ ಅಕ್ಷಯ್
‘ಟಾಕ್ಸಿಕ್’ ಸಿನಿಮಾ ಶೂಟ್ ಭರದಿಂದ ಸಾಗುತ್ತಿದೆ. ಮುಂದಿನ ಮಾರ್ಚ್ಗೆ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Fri, 29 August 25








