AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್ ಕೆಲಸದ ಶೈಲಿ, ಮಾನವೀಯತೆ ನೋಡಿ ದಂಗಾದ ಬಾಲಿವುಡ್ ನಟ ಅಕ್ಷಯ್  

Rocking Star Yash: ಯಶ್ ಅವರು ಕನ್ನಡ ಚಿತ್ರರಂಗದ ಪ್ರಮುಖ ನಟ. ಅವರ ಜೀವನ ಮತ್ತು ವೃತ್ತಿಪರ ಯಶಸ್ಸು ಅನೇಕರಿಗೆ ಸ್ಫೂರ್ತಿಯಾಗಿದೆ. ಬಾಲಿವುಡ್ ನಟ ಅಕ್ಷಯ್ ಓಬೆರಾಯ್ ಅವರು ಯಶ್ ಅವರ ಕೆಲಸದ ಶೈಲಿ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಯಶ್ ಕೆಲಸದ ಶೈಲಿ, ಮಾನವೀಯತೆ ನೋಡಿ ದಂಗಾದ ಬಾಲಿವುಡ್ ನಟ ಅಕ್ಷಯ್  
ಯಶ್
ರಾಜೇಶ್ ದುಗ್ಗುಮನೆ
|

Updated on:Aug 20, 2025 | 9:03 AM

Share

ನಟ ಯಶ್ (Yash) ಅವರು ಅನೇಕರಿಗೆ ಸ್ಫೂರ್ತಿದಾಯಕ ಆಗಿದ್ದಾರೆ. ಅವರು ತಮ್ಮ ಕೆಲಸದ ಮೂಲಕ ಅನೇಕರಿಗೆ ಮಾದರಿ ಆಗಿದ್ದಾರೆ. ಕನ್ನಡದ ಹೀರೋ ಒಬ್ಬರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದು ಎಂದರೆ ಅದು ಸುಲಭದ ವಿಚಾರ ಅಲ್ಲ. ‘ಟಾಕ್ಸಿಕ್’ ಚಿತ್ರವನ್ನು ಇಂಗ್ಲಿಷ್​ನಲ್ಲೂ ಬಿಡುಗಡೆ ಮಾಡಲಾಗುತ್ತಿದೆ. ಯಶ್ ಕೆಲಸದ ಶೈಲಿ ಹಾಗೂ ಮಾನವೀಯತೆ ನೋಡಿ ಬಾಲಿವುಡ್ ನಟ ಅಕ್ಷಯ್ ಓಬೆರಾಯ್ ಸ್ಫೂರ್ತಿಗೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.

‘ನಾನು ಅದೃಷ್ಟವಂತ. ಹೃತಿಕ್ ರೋಷನ್ ಜೊತೆ ಬಾಲಿವುಡ್​ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಇದಾದ ಬಳಿಕ ಯಶ್​ ಜೊತೆ ಸಿನಿಮಾ ಮಾಡುತ್ತಿದ್ದೇನೆ. ಅವರು ದೊಡ್ಡ ಸ್ಟಾರ್. ಆದರೆ, ಮೃದುವಾಗಿ ಮಾತನಾಡುತ್ತಾರೆ. ಅವರು ಮೈಸೂರಿನವರು. ಅವರ ತಂದೆ ಬಸ್ ಡ್ರೈವರ್ ಆಗಿದ್ದರಂತೆ. ಯಶ್ ಅವರು ತಮ್ಮ ದಾರಿಯನ್ನು ನಿರ್ಮಿಸಿಕೊಂಡರು. ಅವರ ಜೊತೆ ಕೆಲಸ ಮಾಡಿ ಸಾಕಷ್ಟು ಸ್ಫೂರ್ತಿ ಪಡೆದಿದ್ದೇನೆ’ ಎಂದಿದ್ದಾರೆ ಅಕ್ಷಯ್.

ಇದನ್ನೂ ಓದಿ
Image
‘ಕ್ವಾಟ್ಲೆ ಕಿಚನ್’ ಶೋ​ನಿಂದ ದಿಢೀರ್​ ಹೊರ ನಡೆದ ಕೆಂಪಮ್ಮ; ಇಲ್ಲಿದೆ ವಿವರ
Image
ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲವೂ ಕಬ್ಬಿಣ; ಕೈ ಕೊಟ್ಟ ಅದೃಷ್ಟ
Image
ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆಗೆ ಕತ್ತರಿ; ಕಿಚ್ಚನ ವಿಚಾರದಲ್ಲಿ ಏನು?
Image
ವಿಮರ್ಶೆಯಲ್ಲಿ ಸೋತ ‘ಕೂಲಿ’ಗೆ ಮೊದಲ ಆಘಾತ ಕೊಟ್ಟ ಪ್ರೇಕ್ಷಕ

‘ನಾನು ಎಲ್ಲರಂತೆ ಕೆಜಿಎಫ್ ಸಿನಿಮಾ ಅಭಿಮಾನಿ. ಅವರು ನಿಜಕ್ಕೂ ಸ್ಪೆಷಲ್. ಅವರು ಎಲ್ಲರಿಗಿಂತಲೂ ಹೆಚ್ಚು ಯೋಚಿಸುತ್ತಾರೆ. ನನ್ನ ವೃತ್ತಿ ಜೀವನದ ಬಗ್ಗೆ ದೊಡ್ಡದಾಗಿ ಯೋಚಿಸುವಂತೆ ಅವರು ಮಾಡಿದ್ದಾರೆ’ ಎಂದು ಅಕ್ಷಯ್ ಹೇಳಿದ್ದಾರೆ.

ಅಕ್ಷಯ್ ಒಬೆರಾಯ್ ಇನ್​ಸ್ಟಾಗ್ರಾಮ್

‘ಟಾಕ್ಸಿಕ್’ ಸಿನಿಮಾಗೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಈ ಚಿತ್ರವನ್ನು ವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ ನಿರ್ಮಾಣ ಮಾಡಿದೆ. ಮುಂದಿನ ವರ್ಷ ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ಗೆ ಎಂಟ್ರಿ ಕೊಟ್ಟ ಕನ್ನಡದ ನಟಿ

ಯಶ್ ಅವರು  ‘ರಾಮಾಯಣ’ ಸಿನಿಮಾದಲ್ಲೂ ಬ್ಯುಸಿ ಇದ್ದಾರೆ. ಈ ಚಿತ್ರ ಕೂಡ 2026ರಲ್ಲಿ ರಿಲೀಸ್ ಆಗಲಿದೆ. ಎರಡೂ ಬಿಗ್ ಬಜೆಟ್ ಸಿನಿಮಾಗಳೇ. ಈ ಚಿತ್ರಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಯಶ್ ಅವರು ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುವತ್ತ ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:59 am, Wed, 20 August 25