AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆಗೆ ಕತ್ತರಿ; ಕಿಚ್ಚನ ವಿಚಾರದಲ್ಲಿ ವಾಹಿನಿ ನಿಲುವೇನು?

ಬಿಗ್ ಬಾಸ್ ಹಿಂದಿ ಸೀಸನ್ 19ರಲ್ಲಿ ಸಲ್ಮಾನ್ ಖಾನ್ ಅವರ ಸಂಭಾವನೆಯಲ್ಲಿ 150 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಈ ಬಾರಿ 5 ತಿಂಗಳ ಕಾಲ ಚಾಲ್ತಿಯಲ್ಲಿರುವ ಈ ಶೋವನ್ನು ಮೊದಲು ಒಟಿಟಿಯಲ್ಲಿ ಮತ್ತು ನಂತರ ಟಿವಿಯಲ್ಲಿ ಪ್ರಸಾರ ಮಾಡಲಾಗುವುದು.ಸಲ್ಮಾನ್ ಖಾನ್ ಮೊದಲ ಮೂರು ತಿಂಗಳು ಮಾತ್ರ ಹೋಸ್ಟ್ ಆಗಿರುತ್ತಾರೆ.

ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆಗೆ ಕತ್ತರಿ; ಕಿಚ್ಚನ ವಿಚಾರದಲ್ಲಿ ವಾಹಿನಿ ನಿಲುವೇನು?
ಸಲ್ಲು-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Aug 20, 2025 | 7:28 AM

Share

ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 19’ ಅನ್ನು ಹೋಸ್ಟ್ ಮಾಡಲು ರೆಡಿ ಆಗಿದ್ದಾರೆ. ಆಗಸ್ಟ್ 30ರಂದು ಶೋ ಪ್ರಸಾರ ಆರಂಭಿಸಲಿದೆ. ಈ ಬಾರಿ ಒಟಿಟಿಯಲ್ಲಿ ಮೊದಲು ಶೋ ಪ್ರಸಾರ ಆಗಲಿದ್ದು, ಆ ಬಳಿಕ ಟಿವಿಯಲ್ಲಿ ಪ್ರಸಾರ ಆಗಲಿದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ಸಲ್ಮಾನ್ ಖಾನ್ ಸಂಭಾವನೆಗೆ ವಾಹಿನಿಯವರು ಕತ್ತರಿ ಹಾಕಲು ನಿರ್ಧರಿಸಿದ್ದಾರೆ. ಹಾಗಂತ ಕಾಸ್ಟ್ ಕಟಿಂಗ್ ವಿಚಾರಕ್ಕಾಗಿ ಅಲ್ಲ. ಇದಕ್ಕೆ ವಿವಿಧ ಕಾರಣಗಳು ಇವೆ. ಹಾಗಾದರೆ ಸುದೀಪ್ (Sudeep) ಸಂಭಾವನೆಯ ಕಥೆ ಏನು? ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ನಡೆಸಿಕೊಡಲು ಪ್ರತಿ ಸೀಸನ್​ಗೆ ಸಲ್ಮಾನ್ ಖಾನ್ ದೊಡ್ಡ ಸಂಭಾವನೆ ಪಡೆಯುತ್ತಾರೆ. 17ನೇ ಸೀಸನ್​ಗಾಗಿ 200 ಕೋಟಿ ರೂಪಾಯಿ ಹಾಗೂ ಸೀಸನ್ 18ಕ್ಕಾಗಿ 250 ಕೋಟಿ ರೂಪಾಯಿ ಸಂಭಾವನೆಯನ್ನು ಅವರು ಪಡೆದಿದ್ದರು. ಆದರೆ, ಈ ಬಾರಿ ಅವರ ಸಂಭಾವನೆ 150 ಕೋಟಿ ರೂಪಾಯಿಗೆ ಇಳಿಸಲಾಗಿದೆ ಎಂದು ವರದಿ ಆಗಿದೆ. ಅಲ್ಲದೆ, ಈ ಬಾರಿಯ ಶೋನ ಬಜೆಟ್ ಕೂಡ ಕಡಿಮೆ ಇದೆ.

‘ಬಿಗ್ ಬಾಸ್ ಹಿಂದಿ ಸೀಸನ್ 19’ ಬರೋಬ್ಬರಿ 5 ತಿಂಗಳುಗಳ ಕಾಲ ಇರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಸಲ್ಮಾನ್ ಖಾನ್ ಅವರು ವಿವಿಧ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ. ಈ ಶೋಗಾಗಿ 5 ತಿಂಗಳು ಸಮಯ ಮುಡಿಪಿಡೋದು ಎಂದರೆ ಅವರಿಗೆ ಚಾಲೆಂಜಿಂಗ್ ಆಗಿ ಇರಲಿದೆ. ಈ ಕಾರಣದಿಂದ ವಿವಿಧ ಹೋಸ್ಟ್​ಗಳನ್ನು ಕರೆಸಲಾಗುತ್ತಿದೆ.

ಇದನ್ನೂ ಓದಿ
Image
ವಿಮರ್ಶೆಯಲ್ಲಿ ಸೋತ ‘ಕೂಲಿ’ಗೆ ಮೊದಲ ಆಘಾತ ಕೊಟ್ಟ ಪ್ರೇಕ್ಷಕ
Image
ಅಂದು ಹೇಳಿದ್ದು ನಿಜವಾಯ್ತು; ಮಹೇಶ್ ಬಾಬು ಹಳೆಯ ಹೇಳಿಕೆ ವೈರಲ್
Image
ಬಿಗ್ ಬಾಸ್​ಗೆ ಎಂಟ್ರಿ ಕೊಡಲಿದೆ ಸೆನ್ಸೇಷನ್ ಸೃಷ್ಟಿಸಿದ ಜೋಡಿ
Image
ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ

ಮೊದಲ ಮೂರು ತಿಂಗಳು ಸಲ್ಮಾನ್ ಖಾನ್ ಅವರೇ ಬಿಗ್ ಬಾಸ್ ನಡೆಸುಕೊಡಲಿದ್ದಾರೆ. ಆ ಬಳಿಕ ಫರಾ ಖಾನ್, ಕರಣ್ ಜೋಹರ್, ಅನಿಲ್ ಕಪೂರ್ ಮೊದಲಾದವರು ಶೋನ ಹೋಸ್ಟ್ ಮಾಡಲಿದ್ದಾರೆ. ಫಿನಾಲೆಗೆ ಸಲ್ಮಾನ್ ಖಾನ್ ನೇತೃತ್ವ ಇರಲಿದೆ. ಮೊದಲು ಶೋ ಜಿಯೋ ಹಾಟ್​ಸ್ಟಾರ್​ನಲ್ಲಿ ಪ್ರಸಾರ ಕಾಣಲಿದೆ. ಆ ಬಳಿಕ ಶೋ ಕಲರ್ಸ್​ ಟಿವಿಯಲ್ಲಿ ಪ್ರಸಾರ ಆಗಲಿದೆ.

ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಜಾಗ ಖರೀದಿ: ಸುದೀಪ್​ರ ಕೊಂಡಾಡಿದ ಅಭಿಮಾನಿಗಳು

ಇನ್ನು, ಸುದೀಪ್ ಸಂಭಾವನೆಗೆ ಯಾವುದೇ ಕತ್ತರಿ ಬೀಳುವ ಸಾಧ್ಯತೆ ಇಲ್ಲ. ಏಕೆಂದರೆ, ಆರಂಭದಿಂದ ಕೊನೆಯವರೆಗೆ ಅವರೇ ಶೋ ನಡೆಸಿಕೊಡಲಿದ್ದಾರೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಅವರ ಸಂಭಾವನೆ ಹೆಚ್ಚುತ್ತಿದೆ. ಕಳೆದ ಸೀಸನ್​ಗಿಂತ ಈ ಸೀಸನ್​ನಲ್ಲಿ ಅವರ ಸಂಭಾವನೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಇನ್ಮುಂದೆ ಆಸ್ಪತ್ರೆ ಬಿಲ್​​ಗಳಲ್ಲಿ ಔಷಧಗಳ ಖರೀದಿ ಬೆಲೆ, MRP ನಮೂದು ಕಡ್ಡಾಯ
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಕರ್ನಾಟಕಕ್ಕೆ ಕೇರಳದ ಮೆಡಿಕಲ್ ತ್ಯಾಜ್ಯ ಡಂಪ್
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
ಸೌಜನ್ಯ ಕೇಸ್​: SITಗೆ ನೀಡಿದ ಮುಚ್ಚಿದ ಲಕೋಟೆ ಬಗ್ಗೆ ಜಯಂತ್ ಸ್ಫೋಟಕ ಹೇಳಿಕೆ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
‘ನಿಮಗೆ ಪಾಠ ಕಲಿಸೋದು ಹೇಗೆಂದು ಗೊತ್ತು’: ಕಿಚ್ಚನ ಕ್ಲಾಸ್​​ಗೆ ರೆಡಿಯಾಗಿ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಾವಿನಕೆರೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ದೇವೇಗೌಡ ಪೂಜೆ
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!
ಮಹಾಲಯ ಅಮಾವಾಸ್ಯೆಯಂದೇ ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!