ಸರ್ಕಾರಿ ಬಸ್ ಓಡಿಸಿದ ಬಾಲಯ್ಯ; ಮುಖದಲ್ಲಿರೋ ಭಯ ನೋಡಿದ್ರೆ ಯಾರೂ ಕೂರೋ ಧೈರ್ಯ ಮಾಡಲ್ಲ
ನಟ ಬಾಲಯ್ಯ ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಾ ಇರುತ್ತಾರೆ. ಅವರು ಈಗ ಸರ್ಕಾರಿ ಬಸ್ ಓಡಿಸಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುವ ಕೆಲಸ ಮಾಡುತ್ಯಿದ್ದಾರೆ.
ಬಾಲಯ್ಯ (Balayya) ಅವರು ಸಿನಿಮಾ ಹೀರೋ ಮಾತ್ರವಲ್ಲ, ಅರು ಹಿಂದೂಪುರದ ಎಂಎಲ್ಎ ಕೂಡ ಹೌದು. ಅವರು ಸದ್ಯ ಸರ್ಕಾರಿ ಬಸ್ ಓಡಿಸಿ ಸುದ್ದಿ ಆಗಿದ್ದಾರೆ. ಹಿಂದೂಪುರದಲ್ಲಿ ಅವರು ಬಸ್ ಡ್ರೈವ್ ಮಾಡಿದ್ದಾರೆ. ಅವರು ಬಸ್ ಚಾಲನೆ ಮಾಡುವಾಗ ಸುತ್ತಲೂ ಸಾಕಷ್ಟು ಅಭಿಮಾನಿಗಳು ಸೇರಿದ್ದರು. ಇದರ ಮಧ್ಯೆಯೇ ಅವರು ಧೈರ್ಯ ಮಾಡಿ ಬಸ್ ಓಡಿಸಿದ್ದಾರೆ. ಆದರೆ, ಸುತ್ತಲೂ ಇರುವ ಜನರನ್ನು ನೋಡಿದಾಗ ಅವರಿಗೆ ಸ್ವಲ್ಪ ಭಯ ಆಗಿದೆ. ಮುಖದಲ್ಲಿ ಅದು ಎದ್ದು ಕಾಣುತ್ತಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

