ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಮುಟ್ಟಿದ್ದೆಲ್ಲವೂ ಕಬ್ಬಿಣ; ಕೈ ಕೊಟ್ಟ ಅದೃಷ್ಟ
ಪೂಜಾ ಹೆಗ್ಡೆ ಅವರು ಒಂದು ಕಾಲದಲ್ಲಿ ಯಶಸ್ವಿ ನಾಯಕಿ ಆಗಿದ್ದರು. ಆದರೆ ಇತ್ತೀಚೆಗೆ ಅವರ ಅದೃಷ್ಟ ಕೈಕೊಟ್ಟಿದೆ. ಅವರು ನಟಿಸಿದ ಹಲವು ಚಿತ್ರಗಳು ಫ್ಲಾಪ್ ಆಗಿವೆ. ‘ಅಲಾ ವೈಕುಂಟಪುರಮುಲೋ’ ನಂತಹ ಯಶಸ್ವಿ ಚಿತ್ರಗಳ ನಂತರ ಅವರ ಚಿತ್ರಗಳು ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ.

ಒಂದು ಕಾಲದಲ್ಲಿ ಪೂಜಾ ಹೆಗ್ಡೆ ಸಿನಿಮಾದ ಭಾಗ ಆಗುತ್ತಾರೆ ಎಂದರ ಆ ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ಭರವಸೆ ಅಭಿಮಾನಿಗಳಿಗೆ ಇರುತ್ತಿತ್ತು. ಅವರು ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಿಗೆ ಇತ್ತು. ಅವರ ಗ್ಲಾಮರ್ ಕೂಡ ಸಿನಿಮಾದ ಹೈಲೈಟ್ ಆಗಿತ್ತು. ಈಗ ಪೂಜಾ ಹೆಗ್ಡೆ (PooJa Hegde ) ಅದೃಷ್ಟ ಕೈ ಕೊಟ್ಟಿದೆ. ಅವರು ಮುಟ್ಟಿದ್ದೆಲ್ಲವೂ ಕಬ್ಬಿಣ ಆಗುತ್ತಿದೆ. ಅವರು ನಟಿಸಿದ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಆ ಬಗ್ಗೆ ಇಲ್ಲಿ ನೋಡೋಣ.
ಪೂಜಾ ಹೆಗ್ಡೆ 2012ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಮೊದಲು ನಟಿಸಿದ್ದು ತಮಿಳಿನಲ್ಲಿ. ನಂತರ ತೆಲುಗು, ಹಿಂದಿ ಸಿನಿಮಾಗಳನ್ನು ಮಾಡಿದರು. 2017-19ರ ಅವಧಿಯಲ್ಲಿ ಸಂಪೂರ್ಣವಾಗಿ ಟಾಲಿವುಡ್ನಲ್ಲಿ ಬ್ಯುಸಿ ಆದರು. 2020ರಲ್ಲಿ ರಿಲೀಸ್ ಆದ ‘ಅಲಾ ವೈಕುಂಟಪುರಮುಲೋ’ ಸಿನಿಮಾ ಹಿಟ್ ಆಯಿತು.
2021ರಿಂದ ಅವರಿಗೆ ಅದೃಷ್ಟ ಕೈ ಕೊಟ್ಟಿದೆ. ‘ಮೋಸ್ಟ್ ಎಲಿಜಬಲ್ ಬ್ಯಾಚುಲರ್’ ಸಿನಿಮಾ ಫ್ಲಾಪ್ ಆಯಿತು. ಆ ಬಳಿಕ ‘ರಾಧೆ ಶ್ಯಾಮ್’ ಕೂಡ ಸೋತು ಸುಣ್ಣವಾಯಿತು. ಪ್ರಭಾಸ್ ಈ ಸಿನಿಮಾದಲ್ಲಿ ಹೀರೋ ಪಾತ್ರ ಮಾಡಿದ್ದರು. ‘ಬೀಸ್ಟ್’, ‘ಸರ್ಕಸ್’ ‘ದೇವ’, ‘ರೆಟ್ರೋ’ ಸಿನಿಮಾಗಳು ಸೋತಿವೆ.
ಇತ್ತೀಚೆಗೆ ಪೂಜಾ ಹೆಗ್ಡೆ ಅವರು ವಿಶೇಷ ಹಾಡುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ‘ಕೂಲಿ’ ಸಿನಿಮಾದಲ್ಲಿ ‘ಮೋನಿಕಾ’ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಪೂಜಾ ಹೆಗ್ಡೆ ಇದ್ದಿದ್ದರಿಂದಲೇ ಸಿನಿಮಾ ಸೋಲು ಕಂಡಿದೆ ಎಂದು ಹೇಳಿದವರೂ ಇದ್ದಾರೆ. ಆದರೆ, ಇದನ್ನು ಫ್ಯಾನ್ಸ್ ಒಪ್ಪೋದಿಲ್ಲ.
ಇದನ್ನೂ ಓದಿ: ವರ್ಷಗಳ ಬಳಿಕ ಮತ್ತೆ ತೆಲುಗು ಚಿತ್ರರಂಗದತ್ತ ಪೂಜಾ ಹೆಗ್ಡೆ?
ಪೂಜಾ ಹೆಗ್ಡೆ ಅವರು ‘ಮೋನಿಕಾ’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅವರು ಮುಂಬರುವ ‘ಜನ ನಾಯಗನ್’ ಚಿತ್ರಕ್ಕೂ ನಾಯಕಿ. ಈ ಸಿನಿಮಾಗೆ ದಳಪತಿ ವಿಜಯ್ ಹೀರೋ. ಇದು ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿದೆ. ಹಾಗಾದಲ್ಲಿ ಈ ಚಿತ್ರ ಗೆಲ್ಲಲೇಬೇಕು. ಈಗ ಪೂಜಾ ಹೆಗ್ಡೆ ಇರೋದಕ್ಕೆ ಭಯ ಆಗುತ್ತಿದೆ ಎಂದು ಕೆಲವರು ಕೊಂಕು ತೆಗೆದಿದ್ದಾರೆ. ಅವರು ಮತ್ತೆ ಯಾವಾಗ ಗೆಲುವಿನ ಟ್ರ್ಯಾಕ್ಗೆ ಮರಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







