AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣಪತಿ ದರ್ಶನಕ್ಕೆ ಹೋಗಿ ಜನರನ್ನು ನೋಡಿ ಭಯಬಿದ್ದ ಜಾನ್ವಿ ಕಪೂರ್

ತುಷಾರ್ ಜಲೋಟಾ ನಿರ್ದೇಶನದ "ಪರಮ್ ಸುಂದರಿ" ಚಿತ್ರ ಆಗಸ್ಟ್ 29 ರಂದು ಬಿಡುಗಡೆಯಾಗಿ ಯಶಸ್ವಿಯಾಗಿದೆ. ಜಾನ್ವಿ ಕಪೂರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಅಭಿನಯ ಮೆಚ್ಚುಗೆ ಪಡೆದಿದೆ. ಗಣಪತಿ ದರ್ಶನಕ್ಕೆ ಹೋದಾಗ ಜನಸಂದಣಿಯಿಂದ ಜಾನ್ವಿ ಅನುಭವಿಸಿದ ಆತಂಕವೂ ಸುದ್ದಿಯಾಗಿದೆ. ಚಿತ್ರದ ಮೊದಲ ದಿನದ ಗಳಿಕೆ 7.25 ಕೋಟಿ ರೂಪಾಯಿ.

ಗಣಪತಿ ದರ್ಶನಕ್ಕೆ ಹೋಗಿ ಜನರನ್ನು ನೋಡಿ ಭಯಬಿದ್ದ ಜಾನ್ವಿ ಕಪೂರ್
ಜಾನ್ವಿ-ಸಿದ್ದಾರ್ಥ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Aug 30, 2025 | 8:09 AM

Share

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾನ್ವಿ ಕಪೂರ್ (Janhvi Kapoor) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಪರಮ್ ಸುಂದರಿ’ ಸಿನಿಮಾ ಆಗಸ್ಟ್ 29ರಂದು ರಿಲೀಸ್ ಆಯಿತು. ತುಷಾರ್ ಜಲೋಟಾ ನಿರ್ದೇಶನದ ಈ ಚಿತ್ರವು ಮೆಚ್ಚುಗೆ ಪಡೆದಿದೆ. ಇದರಲ್ಲಿ ಸಿದ್ಧಾರ್ಥ್ ಉತ್ತರ ಭಾರತದ ಯುವಕನ ಪಾತ್ರವನ್ನು ನಿರ್ವಹಿಸಿದರೆ, ಜಾನ್ವಿ ದಕ್ಷಿಣ ಭಾರತದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ, ಸಿದ್ಧಾರ್ಥ್ ಮತ್ತು ಜಾನ್ವಿ ವಿವಿಧ ನಗರಗಳಲ್ಲಿ ತಮ್ಮ ಚಿತ್ರದ ಪ್ರಚಾರವನ್ನು ಬಿರುಸಿನಿಂದ ಮಾಡುತ್ತಿದ್ದಾರೆ. ಅದೇ ರೀತಿ, ಚಿತ್ರ ಬಿಡುಗಡೆಯಾಗುವ ಮೊದಲು, ಇಬ್ಬರೂ ‘ಲಾಲ್ ಬೌಚಾ ರಾಜ’ ಗಣಪತಿ ದರ್ಶನಕ್ಕೆ ತೆರಳಿದರು. ಆ ಜನಸಂದಣಿಯಲ್ಲಿ ಹೋಗುವಾಗ ಜಾನ್ವಿಯ ಮುಖದಲ್ಲಿ ಹಿಂಜರಿಕೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಜಾನ್ವಿ ಮರಾಠಿ ಹುಡುಗಿಯಾಗಿ ಗಣಪತಿಯನ್ನು ಭೇಟಿ ಮಾಡಲು ಬಂದಿದ್ದರು. ಸಿದ್ದಾರ್ಥ್ ಅವರು ಜಾನ್ವಿಯ ಹಿಂದೆ ನಿಂತು ಜನಸಂದಣಿಯಲ್ಲಿ ಅವರನ್ನು ರಕ್ಷಿಸೋದು ಕಂಡು ಬಂತು. ಮಂಟಪದ ಮುಂದೆ ಜನಸಂದಣಿಯನ್ನು ನೋಡಿ ಜಾನ್ವಿಯ ಮುಖದಲ್ಲಿ ಭಾವ ಬದಲಾಯಿತು. ಭಯ ಮತ್ತು ಚಿಂತೆ ಅವರ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸಿತು. ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಲು ಪ್ರಾರಂಭಿಸಿದರು. ‘ಜಾನ್ವಿ ಇಷ್ಟೊಂದು ಜನಸಂದಣಿಯನ್ನು ಎದುರಿಸುತ್ತಿರುವುದು ಇದೇ ಮೊದಲು. ಆದರೆ ಅನೇಕ ಭಾರತೀಯ ಮಹಿಳೆಯರಿಗೆ ಇದು ದಿನನಿತ್ಯದ ಘಟನೆ’ ಎಂದು ಕೆಲವರು ಹೇಳಿದ್ದಾರೆ.

ಇದನ್ನೂ ಓದಿ
Image
ಗರ್ಲ್​ಫ್ರೆಂಡ್​ಗೆ ಮನೆ ಕೊಟ್ಟು ಬಾಡಿಗೆ ಪಡೆದ ಹೃತಿಕ್ ರೋಷನ್
Image
ಸೋಶಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ರಾಜ್ ಬಿ. ಶೆಟ್ಟಿ; ಕಾರಣ ಏನು?
Image
ಧೂಳೆಬ್ಬಿಸಿದ ರಾಜ್ ಹಂಚಿಕೆ ಮಾಡ್ತಿರೋ ‘ಲೋಕಃ’ ಸಿನಿಮಾ; 9.5 ರೇಟಿಂಗ್
Image
Bigg Boss ಟೈಟಲ್​ನಲ್ಲಿ ಹೆಚ್ಚುವರಿ G ಏಕೆ? ಸಂಖ್ಯಾಶಾಸ್ತ್ರದ ಲೆಕ್ಕಾಚಾರ

ಜಾನ್ವಿ ಕಪೂರ್ ಗಣಪತಿ ನೋಡಲು ಬಂದ ಪೋಸ್ಟ್

View this post on Instagram

A post shared by Snehkumar Zala (@sneyhzala)

‘ಅಂತಹ ಜನಸಂದಣಿಯಲ್ಲಿ ಏಕೆ ಹೋಗಬೇಕು’ ಎಂದು ಕೆಲವರು ಹೇಳಿದ್ದಾರೆ. ‘ಅವರನ್ನು ಸಾಮಾನ್ಯರ ಸರತಿಯ ಸಾಲಿನಲ್ಲಿ ಕಳುಹಿಸಿ’ ಎಂದು ಮತ್ತೊಬ್ಬರು ಬರೆದಿದ್ದಾರೆ. ಜಾನ್ವಿ ‘ಲಾಲ್‌ಬೌಚ ರಾಜ’ನ ಪಾದಗಳಿಗೆ ತಲೆಬಾಗಿ ಆಶೀರ್ವಾದ ಪಡೆದು ನಂತರ ಸಿದ್ಧಾರ್ಥ್‌ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಆಗಲೂ ಅವರ ಮುಖದಲ್ಲಿ ಭಯ ಸ್ಪಷ್ಟವಾಗಿ ಗೋಚರಿಸಿತು.

ಇದನ್ನೂ ಓದಿ: ರೀಲ್ಸ್ ಮಾಡಲು ಹೇಗಿರುತ್ತೆ ನೋಡಿ ಜಾನ್ವಿ ಕಪೂರ್ ತಯಾರಿ

ತುಷಾರ್ ಜಲೋಟಾ ನಿರ್ದೇಶನದ ಜಾನ್ವಿ ಮತ್ತು ಸಿದ್ಧಾರ್ಥ್ ಅಭಿನಯದ ‘ಪರಮ್ ಸುಂದರಿ’ ಚಿತ್ರ ಆಗಸ್ಟ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಮೊದಲ ದಿನ 7.25 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.