ದುಬೈನಲ್ಲಿ ಎಂಜಾಯ್ ಮಾಡ್ತಿರುವಾಗ್ಲೇ ದಾಳಿ ಆಯ್ತು: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ

Updated on: Mar 03, 2026 | 8:02 AM

ಇಸ್ರೇಲ್-ಇರಾನ್ ಸಂಘರ್ಷದ ವೇಳೆ ದುಬೈನಲ್ಲಿದ್ದ ಕನ್ನಡಿಗ ಗೌತಮ್ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತೀಯ ರಾಯಭಾರ ಕಚೇರಿಯಿಂದ ನೆರವು ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ದುಬೈ ಸರ್ಕಾರದ ಸುರಕ್ಷತಾ ಕ್ರಮಗಳನ್ನು ಶ್ಲಾಘಿಸಿದರು. ವಿಮಾನಗಳು ಭರ್ತಿಯಾಗಿರುವುದರಿಂದ ಅವರ ಸ್ನೇಹಿತರು ಇನ್ನೂ ದುಬೈನಲ್ಲೇ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಆತಂಕವನ್ನೂ ವ್ಯಕ್ತಪಡಿಸಿದರು.

ಬೆಂಗಳೂರು, ಮಾರ್ಚ್ 3: ಇರಾನ್-ಇಸ್ರೇಲ್ ಯುದ್ಧದಿಂದ ದುಬೈಯಲ್ಲಿ ಸಿಲುಕಿದ್ದ ಹಲವು ಮಂದಿ ಕನ್ನಡಿಗರು ಬೆಂಗಳೂರಿಗೆ ವಾಪಸಾಗಿದ್ದಾರೆ. ಇದೀಗ, ಕನ್ನಡಿಗ ಗೌತಮ್ ದುಬೈನಲ್ಲಿದ್ದಾಗ ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ದಾಳಿ ನಡೆಯುತ್ತಿದ್ದಾಗ ಅನುಭವಿಸಿದ ಭಯಾನಕ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ದಾಳಿಗಳು ನಡೆಯುತ್ತಿದ್ದಾಗ ತೀವ್ರ ಭಯಗೊಂಡಿದ್ದೆವು. ಆ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಸಂಪರ್ಕ ಅಥವಾ ಸಹಾಯ ದೊರೆಯದಿರುವುದು ತಮಗೆ ಬೇಸರ ತಂದಿದೆ ಎಂದು ಗೌತಮ್ ತಿಳಿಸಿದರು. ಹಲವಾರು ಸ್ನೇಹಿತರು ಇನ್ನೂ ದುಬೈನಲ್ಲೇ ಸಿಲುಕಿಕೊಂಡಿದ್ದು, ವಿಮಾನಗಳು ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಅವರಿಗೆ ವಾಪಸ್ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಐದು-ಆರು ದಿನಗಳಿಂದ ಅವರ ಸ್ನೇಹಿತರು ದುಬೈನಲ್ಲಿಯೇ ಉಳಿದುಕೊಂಡಿದ್ದಾರೆ.

ದಾಳಿಯ ಸಂದರ್ಭದಲ್ಲಿ ಬಾಂಬ್ ಸ್ಫೋಟಗಳನ್ನು ಕಣ್ಣಾರೆ ಕಂಡಿಲ್ಲವಾದರೂ, ದಾಳಿ ನಡೆಯುವುದನ್ನು ನೋಡಿದ್ದಾಗಿ ಗೌತಮ್ ಹೇಳಿದ್ದಾರೆ. ದುಬೈ ಸರ್ಕಾರ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದು, ಸುರಕ್ಷತೆಗೆ ಉತ್ತಮ ವ್ಯವಸ್ಥೆ ಕಲ್ಪಿಸಿತ್ತು ಎಂದು ಅವರು ಶ್ಲಾಘಿಸಿದರು. ದುಬೈ ಸರ್ಕಾರ ಸೂಪರ್, ಅತ್ಯುತ್ತಮವಾಗಿತ್ತು. ಸುರಕ್ಷತೆ ತುಂಬಾ ಚೆನ್ನಾಗಿತ್ತು. ನಾನು ದುಬೈ ಸರ್ಕಾರದ ಬಗ್ಗೆ ಚಿಂತಿತನಾಗಿರಲಿಲ್ಲ, ಕೇವಲ ಭಾರತಕ್ಕೆ ಮರಳಬೇಕಿತ್ತು ಅಷ್ಟೆ ಎಂದು ಗೌತಮ್ ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More