Kannadigas return home: ಗಲಭೆಪೀಡಿತ ಸೂಡಾನ್ ನಲ್ಲಿ ಸಿಲುಕಿದ್ದ 362 ಕನ್ನಡಿಗರು ಬೆಂಗಳೂರಿಗೆ ಸುರಕ್ಷಿತವಾಗಿ ಏರ್ ಲಿಫ್ಟ್!
ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರುವುದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನಡುವೆ ಟ್ವೀಟ್ ಯುದ್ಧ ನಡೆದಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.
ಬೆಂಗಳೂರು: ಆಫ್ರಿಕಾದ ಸೂಡಾನ್ (Sudan) ದೇಶದಲ್ಲ್ಲಿ ಕೆಲ ದಿನಗಳಿಂದ ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಕಲಹ ನಡೆಯುತ್ತಿರುವ ಕಾರಣ ಅಲ್ಲಿ ವಾಸವಾಗಿದ್ದ ಕನ್ನಡಿಗರ (Kannadigas) ಬಗ್ಗೆ ಅತಂಕ ವ್ಯಕ್ತವಾಗಿತ್ತು. ಅಲ್ಲಿ ಸಿಲುಕಿದ್ದ 362 ಕನ್ನಡಿಗರನ್ನು ಭಾರತದ ಸೇನಾ (Indian Army) ವಿಮಾನದಲ್ಲಿ ಏರ್ ಲಿಫ್ಟ್ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಯಿತು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರೆಲ್ಲರ ಸ್ಕ್ರೀನಿಂಗ್ ಮಾಡಿ, ವಿಳಾಸಗಳನ್ನು ಬರೆದುಕೊಂಡು ಕಳಿಸಲಾಗುತ್ತಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರುವುದಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನಡುವೆ ಟ್ವೀಟ್ ಯುದ್ಧ ನಡೆದಿದ್ದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ