ಉತ್ತರ ಪ್ರದೇಶ: ಕಾರಿನಿಂದ ಸ್ಕೂಟಿಗೆ ಗುದ್ದಿದ ಅಪ್ರಾಪ್ತ ಬಾಲಕ, ಮಹಿಳೆ ಸ್ಥಳದಲ್ಲೇ ಸಾವು, ಮಗಳ ಸ್ಥಿತಿ ಗಂಭೀರ

|

Updated on: Aug 04, 2024 | 11:53 AM

ಅಪ್ರಾಪ್ತ ಚಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ನಗರದ ಸಾಕೇತ್ ನಗರ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳದಲ್ಲಿ, 42 ವರ್ಷದ ಭಾವನಾ ಮಿಶ್ರಾ ಮೃತಪಟ್ಟಿದ್ದಾರೆ.

ಅಪ್ರಾಪ್ತ ಚಾಲಕ ಚಲಾಯಿಸುತ್ತಿದ್ದ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗಳ ಸ್ಥಿತಿ ಚಿಂತಾಜನಕವಾಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ನಗರದ ಸಾಕೇತ್ ನಗರ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಘಟನಾ ಸ್ಥಳದಲ್ಲಿ, 42 ವರ್ಷದ ಭಾವನಾ ಮಿಶ್ರಾ ಮೃತಪಟ್ಟಿದ್ದಾರೆ.

ಅವರ 13 ವರ್ಷದ ಮಗಳು ಮೇಧಾವಿ ಮಿಶ್ರಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ಮಕ್ಕಳು ಕಾರು ಚಲಾಯಿಸುವ ಘಟನೆಗಳು ಹೆಚ್ಚಾಗುತ್ತಿವೆ. ಕಳೆದ ಒಂದು ವರ್ಷದಿಂದೀಚೆಗೆ ನಡೆದ ಹಲವು ಘಟನೆಗಳಿಂದ ಪೋಷಕರು ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ.

ಮಹಿಳೆ ಕ್ಲಿನಿಕ್‌ನಿಂದ ಹಿಂತಿರುಗುತ್ತಿದ್ದಾಗ ಅವರ ಸ್ಕೂಟರ್‌ಗೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಕಾರು ಚಾಲಕ ದ್ವಿತೀಯ ಪಿಯುಸಿ ವಿದ್ಯಾರ್ಥಿ, ಎಸ್‌ಯುವಿಯು ಗಂಟೆಗೆ ಸುಮಾರು 100 ಕಿಮೀ ವೇಗದಲ್ಲಿ ಚಲಿಸುತ್ತಿತ್ತು.

ಮತ್ತಷ್ಟು ಓದಿ: ಇಟಾವಾದಲ್ಲಿ ಡಬಲ್ ಡೆಕ್ಕರ್ ಬಸ್ ಹಾಗೂ ಕಾರು ನಡುವೆ ಅಪಘಾತ, 7 ಮಂದಿ ಸಾವು, 45ಕ್ಕೂ ಅಧಿಕ ಜನರಿಗೆ ಗಾಯ

ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆಯುವ ಮೊದಲು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆರೋಪಿ ಬಾಲಕನಿಗೆ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ ಮತ್ತು ಆತ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಸ್ಟಂಟ್ ಮಾಡಲು ಮುಂದಾಗಿದ್ದ.

ಬಾಲಕನ ತಂದೆಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ವೇಳೆ ಬಾಲಕನ ಮೂವರು ಸ್ನೇಹಿತರು ಕಾರಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಪ್ರಾಪ್ತ ಚಾಲಕನನ್ನು ಅವನ ತಂದೆಯೊಂದಿಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಮೃತಳ ಪತಿ ಅನುಪ್ ಮಿಶ್ರಾ ನೀಡಿದ ದೂರಿನ ಮೇರೆಗೆ ಪೊಲೀಸರು ಅಪರಾಧಿ ನರಹತ್ಯೆ ಮತ್ತು ಅಜಾಗರೂಕ ಚಾಲನೆ ಸೇರಿದಂತೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ