Sapthami Gowda: ‘ಭಾಷೆಯ ಭೇದ ಇಲ್ಲ, ಆದ್ರೆ ಕನ್ನಡ ಸಿನಿಮಾ ಜಾಸ್ತಿ ಮಾಡ್ತೀನಿ’: ‘ಕಾಂತಾರ’ ನಟಿ ಸಪ್ತಮಿ ಗೌಡ
Kantara Movie | Sapthami Gowda: ‘ಕಾಂತಾರ’ ಸಿನಿಮಾದ ನಟಿ ಸಪ್ತಮಿ ಗೌಡ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳ ಮನದಲ್ಲಿದೆ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾಗಳು ರಾರಾಜಿಸುತ್ತಿರುವ ಈ ಕಾಲದಲ್ಲಿ ಚಿತ್ರರಂಗಗಳ ನಡುವೆ ಭಾಷೆಯ ಗಡಿ ಇಲ್ಲ. ಬೇಡಿಕೆ ಇರುವ ಕಲಾವಿದರಿಗೆ ಎಲ್ಲ ಭಾಷೆಗಳಿಂದಲೂ ಆಫರ್ ಬರುತ್ತವೆ. ‘ಕಾಂತಾರ’ (Kantara Movie) ಸಿನಿಮಾದ ನಟಿ ಸಪ್ತಮಿ ಗೌಡ ಅವರಿಗೆ ಹೊರ ರಾಜ್ಯಗಳಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಹಾಗಾದರೆ ಅವರ ಮುಂದಿನ ಸಿನಿಮಾ ಯಾವುದು ಎಂಬ ಕೌತುಕದ ಪ್ರಶ್ನೆ ಅಭಿಮಾನಿಗಳ ಮನದಲ್ಲಿದೆ. ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ (Kateel Durga Parameshwari Temple) ಭೇಟಿ ನೀಡಿದ ಸಂದರ್ಭದಲ್ಲಿ ಈ ಬಗ್ಗೆ ಸಪ್ತಮಿ ಗೌಡ ಮಾತನಾಡಿದ್ದಾರೆ. ‘ಸಾಕಷ್ಟು ಸ್ಕ್ರಿಪ್ಟ್ ಕೇಳುತ್ತಿದ್ದೇನೆ. ಸದ್ಯದಲ್ಲೇ ಅನೌನ್ಸ್ ಮಾಡುತ್ತೇನೆ. ಭಾಷೆಯ ಭೇದ ಇಲ್ಲ. ಕನ್ನಡದಲ್ಲಿ ಜಾಸ್ತಿ ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ’ ಎಂದು ಸಪ್ತಮಿ ಗೌಡ (Sapthami Gowda) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 16, 2022 02:10 PM
Latest Videos