ಬಾಲಿವುಡ್ ದಿಗ್ಗಜರ ಎದುರು ವಿಷ್ಣುವರ್ಧನ್ ಹಾಡು ಹಾಡಿದ ಜಯರಾಮ್
Jayaram Sing Kannada Song: ಜಯರಾಮ್ ಅವರು ಕನ್ನಡದಲ್ಲಿ ಕಾಂತಾರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ವಿಷ್ಣುವರ್ಧನ್ ಹಾಡನ್ನು ಹಾಡಿದ್ದಾರೆ. ಈ ಹಾಡು ಗಮನ ಸೆಳೆಯುವ ರೀತಿಯಲ್ಲಿ ಇದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ ಅನ್ನೋದು ವಿಶೇಷ.
ವಿಷ್ಣುವರ್ಧನ್ ನಟಿಸಿದ ‘ಬಂಧನ’ ಸಿನಿಮಾದ ‘ನೂರೊಂದು ನೆನಪು..’ ಹಾಡು ಕಲ್ಟ್ ಕ್ಲಾಸಿಕ್ ಎನ್ನಬಹುದು. ಈ ಸಿನಿಮಾದ ಹಾಡನ್ನು ‘ಕಾಂತಾರ: ಚಾಪ್ಟರ್ 1’ ಚಿತ್ರದ ಕಲಾವಿದ ಜಯರಾಮ್ ಅವರು ಹಾಡಿದ್ದಾರೆ. ಅದೂ ಕನ್ನಡಿಗರ ಎದುರು ಅಲ್ಲ, ಬಾಲಿವುಡ್ ದಿಗ್ಗಜರಾದ ಅಜಯ್ ದೇವಗನ್, ಅಕ್ಷಯ್ ಕುಮಾರ್, ಟಬು ಮೊದಲಾದವರ ಎದುರು ಈ ಹಾಡನ್ನು ಹಾಡಿದ್ದಾರೆ. ಪ್ರೀತಿ ತೋರಿದ ಕರ್ನಾಟಕದ ಮಂದಿಗೆ ಅವರು ಧನ್ಯವಾದ ಹೇಳಿದ್ದನ್ನು ಕಾಣಬಹುದು. ಆ ಸಂದರ್ಭದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.