ಕಾರ ಹುಣ್ಣಿಮೆ: ಜನರ ಮೇಲೆರಗಿದ ಹೋರಿ, ಕಾಲಡಿ ಸಿಲುಕಿದ ಮೂವರು ವೃದ್ದರು

|

Updated on: Jun 05, 2023 | 4:28 PM

ರಸ್ತೆ ಅಕ್ಕಪಕ್ಕ ಜನರ ಜೊತೆ ನಿಂತು ಹೋರಿ ಓಟ ವೀಕ್ಷಿಸುತ್ತಿದ್ದಾಗ ಒಮ್ಮೆಲೆ ಹೋರಿ ಜನರ ಮೇಲೆರಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಬಾಗಲಕೋಟೆ: ಕಾರ ಹುಣ್ಣಿಮೆ (Kara Hunnime) ಯನ್ನು ಅನ್ನದಾತನ ಮೊದಲ ಹಬ್ಬ ಎಂದು ಕರೆಯುತ್ತಾರೆ. ರೈತಾಪಿ ಜನರು ತಮ್ಮ ಹೋರಿಗಳನ್ನು ಬಣ್ಣಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜತೆಗೆ ಕರಿ ಹರಿಯಲು ಹೋರಿಗಳನ್ನು ಓಡಿಸುವ ಆಚರಣೆ ಕೂಡ ಇದೆ. ಈ ಕರಿ ಹರಿಯುವ ಸ್ಪರ್ಧೆಯಲ್ಲಿ ಕೆಲ ಅನಾಹುತಗಳು ಆಗುವುದುಂಟು. ಸದ್ಯ ಅಂತಹದ್ದೇ ಘಟನೆಯೊಂದು ಜಿಲ್ಲೆ ಮಹಾಲಿಂಗಪುರ ಪಟ್ಟಣದ ನಡುಚೌಕಿ ಬಳಿ ನಡೆದಿದೆ. ಹೋರಿ ಓಡಿಸುವ ವೇಳೆ ಜನರ ಮೇಲೆ ನುಗ್ಗಿದ್ದು, ಮೂವರು ವೃದ್ದರು ಹೋರಿಯ ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ರಸ್ತೆ ಅಕ್ಕಪಕ್ಕ ಜನರ ಜೊತೆ ನಿಂತು ಹೋರಿ ಓಟ ವೀಕ್ಷಿಸುತ್ತಿದ್ದಾಗ ಒಮ್ಮೆಲೆ ಹೋರಿ ಜನರ ಮೇಲೆರಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on