Chakravarthy Sulibele; ಜೈಲಿಗೆ ಹಾಕುವಂಥ ತಪ್ಪು ನನ್ನಿಂದ ಯಾವುದಾಗಿದೆ ಅಂತ ಸಚಿವ ಎಂಬಿ ಪಾಟೀಲರೇ ಸ್ಪಷ್ಟಪಡಿಸಬೇಕು: ಚಕ್ರವರ್ತಿ ಸೂಲಿಬೆಲೆ, ಚಿಂತಕ
ಸರ್ಕಾರದಲ್ಲಿರುವವರು ಕೆಲಸಕ್ಕೆ ಬಾರದ ಮಾತುಗಳನ್ನಾಡುವ ಬದಲು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಯಾವುದೇ ಗೊಂದಲವಿಲ್ಲದೆ ಈಡೇರಿಸುವ ಕಡೆ ಗಮನ ನೀಡಬೇಕೆಂದು ಸೂಲಿಬೆಲೆ ಹೇಳಿದರು.
ಬೆಂಗಳೂರು: ಸಚಿವ ಎಂಬಿ ಪಾಟೀಲ್ (MB Patil) ಜೈಲಿಗೆ ಹಾಕಿಸಬೇಕಾಗುತ್ತದೆ ಅಂತ ನೀಡಿರುವ ಹೇಳಿಕೆಗೆ ಚಿಂತಕ ಮತ್ತು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ತಿರುಗೇಟು ನೀಡಿದ್ದಾರೆ. ಜೈಲಿಗೆ ಹಾಕಿಸುವಂಥ ಯಾವ ಪ್ರಮಾದ ತನ್ನಿಂದ ಜರುಗಿದೆ ಅಂತ ಸಚಿವರೇ ಹೇಳಬೇಕು, ಅಸಲು ಸಂಗತಿಯೇನೆಂದರೆ ಅಧಿಕಾರದಲ್ಲಿರುವವರಿಗೆ ಅವರಿಗೆ ಸಹ್ಯವಾಗದ ಸತ್ಯಗಳನ್ನು (truth) ಮಾತಾಡಿದರೆ, ಆಡಳಿತದಲ್ಲಿನ ಅಪಸವ್ಯಗಳನ್ನು ಎತ್ತಿತೋರಿದರೆ ಪಥ್ಯವಾಗದು, ಅಧಿಕಾರ ತಮ್ಮ ಕೈಯಲ್ಲಿದೆ ಅನ್ನೋ ಕಾರಣಕ್ಕೆ ನಾಲಗೆಯನ್ನು ಬೇಕಾಬಿಟ್ಟಿ ಹರಿಬಿಡುತ್ತಾರೆ ಎಂದು ಚಕ್ರವರ್ತಿ ಹೇಳಿದರು. ಸರ್ಕಾರದಲ್ಲಿರುವವರು ಕೆಲಸಕ್ಕೆ ಬಾರದ ಮಾತುಗಳನ್ನಾಡುವ ಬದಲು ಜನರಿಗೆ ನೀಡಿದ ಗ್ಯಾರಂಟಿಗಳನ್ನು ಯಾವುದೇ ಗೊಂದಲವಿಲ್ಲದೆ ಈಡೇರಿಸುವ ಕಡೆ ಗಮನ ನೀಡಬೇಕೆಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ

