ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ತ್ವೈಬಾ ಗಾರ್ಡನ್‌ನ ಮುಖ್ಯಸ್ಥ ಅದಿ ಕಿಲ್ಲೂರು ಓರ್ವ ಬಾಲಕನಿಗೆ ಕ್ರೂರವಾಗಿ ಹೊಡೆದಿರುವ ಆರೋಪ ಕೇಳಿಬಂದಿದೆ. ಹಲ್ಲೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಿ ಕಿಲ್ಲೂರರನ್ನು ಸಂಸ್ಥೆಯಿಂದ ವಜಾ ಮಾಡಲಾಗಿದೆ ಮತ್ತು ಪೊಲೀಸ್ ದೂರು ದಾಖಲಾಗಿದೆ.
ಉಡುಪಿ, ಡಿಸೆಂಬರ್ 13: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆ ತ್ವೈಬಾ ಗಾರ್ಡನ್ ಮುಖ್ಯಸ್ಥ ಅದಿ ಕಿಲ್ಲೂರು ಓರ್ವ ಬಾಲಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾರ್ಕಳದ ಬಂಗ್ಲೆಗುಡ್ಡೆಯಲ್ಲಿ ಘಟನೆ ನಡೆದಿದೆ. ಬಾಲಕನ ಮೈ ಮೇಲೆ ಬರೆ ಬರುವ ರೀತಿಯಲ್ಲಿ ಹೊಡೆಯಲಾಗಿದೆ. ಪುತ್ರನ ಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕಿದ್ದಾರೆ. ಬಾಲಕನಿಗೆ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಗನ ಸ್ಥಿತಿ ಕಂಡು ತಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಅದಿ ಕಿಲ್ಲೂರು ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕನ ಪೋಷಕರು ಅಗ್ರಹಿಸಿದ್ದಾರೆ. ತೀವ್ರ ಆಕ್ರೋಶ ಬೆನ್ನಲ್ಲಿ ಹಲ್ಲೆ ನಡೆಸಿದ ಸಂಸ್ಥೆಯ ಮುಖ್ಯಸ್ಥ ಅದಿ ಕಿಲ್ಲೂರನನ್ನು ವಜಾ ಮಾಡಕಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Dec 13, 2024 01:19 PM