AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಮೀಸಲಾತಿ ಹೋರಾಟ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಣ್ಣ ಬಯಲಾಗಿದೆ: ಬಸನಗೌಡ ಯತ್ನಾಳ್

ಪಂಚಮಸಾಲಿ ಮೀಸಲಾತಿ ಹೋರಾಟ; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಣ್ಣ ಬಯಲಾಗಿದೆ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on:Dec 13, 2024 | 12:19 PM

Share

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಷಯದಲ್ಲಿ ಮಾತಾಡುವಾಗ ಬಸನಗೌಡ ಯತ್ನಾಳ್ ಹಿಂದೆ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಮೀಸಲಾತಿ ನೀಡಲಿಲ್ಲ ಎಂದು ಕೇಳಿದರೆ ಸಮಂಜಸ ಉತ್ತರ ನೀಡಲ್ಲ. ತಮ್ಮ ಸರ್ಕಾರ 2ಸಿ ಮತ್ತು 2ಡಿ ಮೀಸಲಾತಿ ನೀಡಿದೆ ಎಂದು ಹೇಳಿ ಮುಸಲ್ಮಾನರಿಗೆ ನೀಡಿದ್ದ ಶೇಕಡ 4 ಮೀಸಲಾತಿ ಯಾಕೆ ಸಾಧುವಲ್ಲ ಅಂತ ವಿವರಿಸುತ್ತಾ ಹೋಗುತ್ತಾರೆ.

ಬೆಳಗಾವಿ: ವಿಧಾನಸಭಾ ಅಧಿವೇಶನದ ಇವತ್ತಿನ ಕಾರ್ಯಕಲಾಪ ಶುರುವಾಗುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟದಲ್ಲಿ ಭಾಗಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಬ್ಬಗೆಯ ನೀತಿ ತಳೆದಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು. ಹಿಂದೆ ಅವರು ಸಮಾಜದ ಮಗಳಾಗಿ ಹೋರಾಟದಲ್ಲಿ ಭಾಗವಹಿಸಿದ್ದೇನೆ ಅಂತ ಹೇಳಿದ್ದರು, ಆದರೆ ನಿನ್ನೆ ಸದನದಲ್ಲಿ ಮಾತಾಡುವಾಗ ಅವರು ಪ್ರತಿಭಟನೆಕಾರರ ಬಳಿ ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದೆ ಅನ್ನುತ್ತಾರೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Assembly Session; ಐಪಿಎಸ್ ಅಧಿಕಾರಿಗೆ ಲಾಠಿಚಾರ್ಜ್ ಆದೇಶ ನೀಡುವಾಗ ಡ್ರೆಸ್​ಕೋಡ್ ಹೇಗಿರಬೇಕೆಂದು ಗೊತ್ತಿರಲಿಲ್ಲ: ಯತ್ನಾಳ್

Published on: Dec 13, 2024 12:13 PM
Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.