Loading video

Chikkaballapur News; ಕರ್ಮ ಸುಧಾಕರ್​ರನ್ನು ಹಿಂಬಾಲಿಸುತ್ತಿದೆ, ಹಿಂದೆ ನಾನು ಮಾಡುತ್ತಿದ್ದುದನ್ನು ಈಗ ಅವರು ಮಾಡುತ್ತಿದ್ದಾರೆ: ಪ್ರದೀಪ್ ಈಶ್ವರ್

|

Updated on: Jul 29, 2023 | 5:20 PM

ಅಧಿಕಾರ ಶಾಶ್ವತ ಅಲ್ಲ ಅಂತ ತನಗೂ ಗೊತ್ತಿದೆ, ಅಧಿಕಾರ ಇದೆಯಂತ ಮೆರೆಯುವುದು ಸರಿಯಲ್ಲ, ತಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೆ ಕೆಪಿಸಿಸಿ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದೆ ಎಂದು ಪ್ರದೀಪ್ ಹೇಳಿದರು.

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮತ್ತು ಇದೇ ಕ್ಷೇತ್ರದ ಮಾಜಿ ಶಾಸಕ ಡಾ ಕೆ ಸುಧಾಕರ್ (Dr K Sudhakar) ನಡುವೆ ಜಂಗೀ ಕುಸ್ತಿ ಜಾರಿಯಲ್ಲಿದೆ. ಇಂದು ಬೆಳಗ್ಗೆ ಸುಧಾಕರ್ ಅವರು ಪ್ರದೀಪ್ ರನ್ನು ಮನಸಾರೆ ಟೀಕಿಸಿದರೆ ಮಧ್ಯಾಹ್ನ ಪ್ರದೀಪ್ ಪಾಳಿ. ಕರ್ಮ (Karma) ಹಿಂಬಾಲಿಸುತ್ತದೆ ಅಂತ ಹೇಳೋದು ಸತ್ಯ, ಹೋದ ವರ್ಷ ಅವರು ಶಾಸಕರಾಗಿದ್ದರು ತಾನು ವಾಟ್ಸ್ಯಾಪ್ ನಲ್ಲಿ ವಿಡಿಯೋ ಮಾಡುತ್ತಿದ್ದೆ ಈಗ ಅವರು ವಿಡಿಯೋ ಮಾಡುತ್ತಿದ್ದಾರೆ ಮತ್ತು ತಾನು ಶಾಸಕನಾಗಿರುವುದಾಗಿ ಪ್ರದೀಪ್ ಹೇಳಿದರು. ಸುಧಾಕರ್ ಈಗ ಬಹಳ ಕಂಗೆಟ್ಟ ಸ್ಥಿತಿಯಲ್ಲಿದ್ದಾರೆ, ಯಾಕೆಂದರೆ ಬಿಜೆಪಿ ಅವರನ್ನು ಇಟ್ಕೊಳ್ಳಲ್ಲ, ಕಾಂಗ್ರೆಸ್ ಹತ್ತಿರ ಸೇರಿಸಲ್ಲ ಮತ್ತು ಇಂಡಿಪೆಂಡೆಂಟ್ ಅಗಿ ಬಂದರೆ ತಾನು ಬಿಡಲ್ಲ ಎಂದು ಪ್ರದೀಪ್ ಹೇಳಿದರು. ಅಧಿಕಾರ ಶಾಶ್ವತ ಅಲ್ಲ ಅಂತ ತನಗೂ ಗೊತ್ತಿದೆ, ಅಧಿಕಾರ ಇದೆಯಂತ ಮೆರೆಯುವುದು ಸರಿಯಲ್ಲ, ತಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೆ ಕೆಪಿಸಿಸಿ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದೆ, ಸುಧಾಕರ್ ಬಿಜೆಪಿ ಕಚೇರಿಗೆ ಹೋಗಿ ಯಾವುದಾದರೂ ಕೆಲಸ ಮಾಡುತ್ತಾರೆಯೇ? ಎಂದು ಪ್ರದೀಪ್ ಕೇಳಿದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ