ನಿತ್ಯಾ ಹಾಗೂ ನಿಧಿ ಜೊತೆ ಡ್ಯಾನ್ಸ್ ಮಾಡಿದ ಕರ್ಣ; ಇದು ಕರ್ಣ ಜಾತ್ರೆ

Edited By:

Updated on: Nov 15, 2025 | 8:14 AM

ಜೀ ಕನ್ನಡ ಸಾಕಷ್ಟು ಹೊಸ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಇದರಲ್ಲಿ ಕರ್ಣ ಧಾರಾವಾಹಿ ಕೂಡ ಒಂದು ಈ ಧಾರಾವಾಹಿ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಧಾರಾವಾಹಿಯಲ್ಲಿ ಹಲವು ವಿಷಯಗಳು ಚರ್ಚೆಗೆ ಬರೋ ಸಾಧ್ಯತೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

‘ಕರ್ಣ’ ಧಾರಾವಾಹಿಯಲ್ಲಿ ಕಿರಣ್ ರಾಜ್ ಕರ್ಣ ಪಾತ್ರ ಮಾಡುತ್ತಿದ್ದರೆ ನಿಧಿ ಪಾತ್ರದಲ್ಲಿ ಭವ್ಯಾ ಗೌಡ, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ ನಟಿಸಿದ್ದಾರೆ. ಈ ಎಲ್ಲಾ ಪಾತ್ರಧಾರಿಗಳು ಈಗ ಕರ್ಣ ಜಾತ್ರೆಯ ಭಾಗ ಆಗಿದ್ದಾರೆ ಎಂಬುದು ವಿಶೇಷ. ಕರ್ಣ ಜಾತ್ರೆಯು ಕಲ್ಪತರ ನಾಡು ತುಮಕೂರಿನ ವಿಜಯನಗರದ ಸರ್ವೋದಯ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಭಾನುವಾರ (ನವೆಂಬರ್ 16) ಸಂಜೆ ಐದು ಗಂಟೆಗೆ ಈ ಈವೆಂಟ್ ನಡೆಯಲಿದೆ ಎಂಬುದು ವಿಶೇಷ.  ಇದರಲ್ಲಿ ನೀವು ಭಾಗವಹಿಸುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More