Assembly Session: ವಿಧಾನಮಂಡಲ ಅಧಿವೇಶನ, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ
ಕರ್ನಾಟಕದ ಜಂಟಿ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ಮೇಲೆ ಎರಡು ದಿನಗಳ ಚರ್ಚೆ ನಡೆಯಲಿದೆ. ವಿಪಕ್ಷ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ. ಕಾನೂನು ಸುವ್ಯವಸ್ಥೆ, ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ, ಕೆಪಿಎಸ್ಸಿ ನ್ಯೂನತೆಗಳು, ಸಿಇಟಿ ಪರೀಕ್ಷೆಯಲ್ಲಿನ ಗ್ರೇಸ್ ಮಾರ್ಕ್‌ಗಳು, ಆರೋಗ್ಯ ಇಲಾಖೆಯ ವೈಫಲ್ಯಗಳು, ಅಭಿವೃದ್ಧಿ ಕಾರ್ಯಗಳ ನಿಧಾನಗತಿ ಮತ್ತು ಎಂಇಎಸ್ ಚಟುವಟಿಕೆಗಳ ವಿರುದ್ಧ ಬಿಜೆಪಿ ತೀವ್ರ ಆರೋಪಗಳನ್ನು ಮಾಡಲು ಸಿದ್ಧವಾಗಿದೆ.
ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷ ಬಿಜೆಪಿ ಸಿದ್ಧವಾಗಿದೆ. ಜಂಟಿ ಮತ್ತು ಬಜೆಟ್ ಅಧಿವೇಶನದಲ್ಲಿ ಸದನದಲ್ಲಿ 12ಕ್ಕೂ ಹೆಚ್ಚು ವಿಚಾರಗಳನ್ನು ಪ್ರಸ್ತಾಪಿಸಲು ಬಿಜೆಪಿ ಸಿದ್ಧತೆ ನಡೆಸಿದ. ರಾಜ್ಯದಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ, ಮೈಕ್ರೋ ಫೈನಾನ್ಸ್ ಸಂಬಂಧಿಸಿದಂತೆ ಸುಗ್ರೀವಾಜ್ಞೆ ವಿಚಾರ, ಕೆಪಿಎಸ್ಸಿಯಿಂದ ಆಗಿರುವ ನ್ಯೂನತೆಗಳು, ಸಿಇಟಿ ಪರೀಕ್ಷೆಯಲ್ಲಿ ನೀಡಿರುವ ಗ್ರೇಸ್ ಅಂಕಗಳಿಂದ ಉಂಟಾದ ಗೊಂದಲಗಳು ಮತ್ತು ಓಎಂಆಆರ್ಶೀಟ್ಗಳ ಸೋರಿಕೆ, ಬಾಣಂತಿಯರ ಸಾವು ಸೇರಿ ಆರೋಗ್ಯ ಇಲಾಖೆಯ ವೈಫಲ್ಯಗಳು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದಿರುವ ವಿಚಾರ ಮತ್ತು ಎಂಇಎಸ್ ಪುಂಡಾಟಿಕೆ ತಡೆಯುವಲ್ಲಿ ಸರ್ಕಾರದ ನಿರ್ಲಕ್ಷ್ಯ ಸೇರಿದಂತೆ ಇನ್ನೀತರ ವಿಚಾರಗಳನ್ನು ಚರ್ಚಿಸಲಿದ್ದಾರೆ.