Karnataka Assembly Polls; ಜನ ನೀಡಿದ ತೀರ್ಪನ್ನು ಸ್ವೀಕರಿಸದಿದ್ದರೆ ಹುಚ್ಚುತನ ಅನಿಸಿಕೊಳ್ಳುತ್ತದೆ: ವಿ ಸೋಮಣ್ಣ
ತಮ್ಮ ಮಗನನ್ನೇ ಉತ್ತರಾಧಿಕಾರಿ ಮಾಡುವ ಮನಸ್ಸಿದೆ, ತನಗೆ ಈ ಬಾರಿ ಟಿಕೆಟ್ ಬೇಡ, ಮಗನಿಗೆ ನೀಡಿ ಅಂತ ಹೈಕಮಾಂಡ್ ಗೆ ಆಗ್ರಹಿಸಿದರೂ ಕೇಳಲಿಲ್ಲ ಎಂದು ಸೋಮಣ್ಣ ಹೇಳಿದರು.
ಬೆಂಗಳೂರು: ಹೈಕಮಾಂಡ್ (high command) ಮಾತಿಗೆ ಕಟ್ಟುಬಿದ್ದು ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆ ಸೋತ ವಿ ಸೋಮಣ್ಣ (V Somanna) ಜನರ ತೀರ್ಪನ್ನು ಅಂಗೀಕರಿಸಿದ್ದಾರಾದರೂ ಬಹಳ ಬೇಸರ ಮಾಡಿಕೊಂಡಿರುವುದಂತೂ ಸತ್ಯ. ಪರಿಶ್ರಮಜೀವಿ ಮತ್ತು ಕೆಲಸಗಾರನಾಗಿದ್ದ ತನ್ನನ್ನು ಜನ ನಿರುದ್ಯೋಗಿಯನ್ನಾಗಿ (jobless) ಮಾಡಿದ್ದಾರೆ ಎಂದು ವಿಷಾದಭರಿತ ಧ್ವನಿಯಲ್ಲಿ ಅವರು ಹೇಳುತ್ತಾರೆ. ಬೆಳಗ್ಗೆ 4 ಗಂಟೆಗೆ ಏಳುವ ಅಭ್ಯಾಸವಿರುವ ತನಗೆ ಈಗ ಎದ್ದು ಏನು ಮಾಡೋದು ಅನ್ನುವಂತಾಗಿದೆ ಎಂದು ಹೇಳಿದ ಸೋಮಣ್ಣ, ತಮ್ಮ ಮಗನನ್ನೇ ಉತ್ತರಾಧಿಕಾರಿ ಮಾಡುವ ಮನಸ್ಸಿದೆ, ತನಗೆ ಈ ಬಾರಿ ಟಿಕೆಟ್ ಬೇಡ, ಮಗನಿಗೆ ನೀಡಿ ಅಂತ ಹೈಕಮಾಂಡ್ ಗೆ ಆಗ್ರಹಿಸಿದರೂ ಕೇಳಲಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ