ಬೆಳಗಾವಿ ಅಧಿವೇಶನ; ಪೃಥ್ವಿಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಬಂಧಿಸಿ ಕ್ರಮ ಜರುಗಿಸಲಾಗುವುದು: ಜಿ ಪರಮೇಶ್ವರ್, ಗೃಹ ಸಚಿವ
ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರಣ ಅದನ್ನು ಹಳ್ಳ ಹಿಡಿಸಲಾಗುತ್ತಿದೆಯೇ ಅಂತ ವಿಪಕ್ಷ ನಾಯಕರು ಕೇಳಿದಾಗ ಉತ್ತರಿಸಲು ಎದ್ದು ನಿಂತ ಪರಮೇಶ್ವರ್, ದೂರಿನ ಪ್ರತಿಯನ್ನು ಸದನದಲ್ಲಿ ಓದಿದರು. ಎರಡನೇ ಪುಟದ ಎರಡನೆ ಪ್ಯಾರಾ ಓದುವಂತೆ ವಿಜಯೇಂದ್ರ ಮನವಿ ಮಾಡಿದಾಗ ಪರಮೇಶ್ವರ್ ಅದನ್ನು ಓದಿದರು.
ಬೆಳಗಾವಿ: ಚಳಿಗಾಲದ ಬೆಳಗಾವಿ ಅಧಿವೇಶನದಲ್ಲಿ ಇಂದು ಬಿಜೆಪಿ ಕಾರ್ಯಕರ್ತ ಪೃಥ್ವಿಸಿಂಗ್ (BJP worker Prithvi Singh) ಮೇಲೆ ಹರಿತವಾದ ಆಯುಧದಿಂದ ನಡೆಸಿರುವ ಹಲ್ಲೆ ಪ್ರಕರಣ ಪ್ರತಿಧ್ವನಿಸಿತು. ನಿನ್ನೆ ಮೊನ್ನೆ ಸದನದಲ್ಲಿ ಗೈರುಹಾಜರಾಗಿದ್ದ ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಇಂದು ಪ್ರತ್ಯಕ್ಷರಾದರು. ಕಾರ್ಯಕರ್ತನ ಮೇಲೆ ಗಂಭೀರವಾದ ಹಲ್ಲೆ ನಡೆದರೂ ಬೆಳಗಾವಿ ಪೊಲೀಸರು ಇನ್ನೂ ಯಾಕೆ ಐಪಿಸಿ ಸೆಕ್ಷನ್ 307 ರ ಅಡಿ ಕೇಸ್ ದಾಖಲಿಸಿಕೊಂಡಿಲ್ಲ ಮತ್ತು ಇದುವರೆಗೆ ಯಾಕೆ ಒಬ್ಬನನ್ನೂ ಬಂಧಿಸಿಲ್ಲ ಅಂತ ಬಿಜೆಪಿ ಶಾಸಕರಾದ ಬಿವೈ ವಿಜಯೇಂದ್ರ (BY Vijayendra), ಸುನೀಲ ಕುಮಾರ್ (Sunil Kumar), ಸುರೇಶ್ ಕುಮಾರ್ (Suresh Kumar) ಸಭಾಧ್ಯಕ್ಷರ ಮೂಲಕ ಪರಮೇಶ್ವರ್ ಅವರನ್ನು ಪ್ರಶ್ನಿಸಿದರು. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಪ್ರಕರಣದಲ್ಲಿ ಆರೋಪಿಯಾಗಿರುವ ಕಾರಣ ಅದನ್ನು ಹಳ್ಳ ಹಿಡಿಸಲಾಗುತ್ತಿದೆಯೇ ಅಂತ ವಿಪಕ್ಷ ನಾಯಕರು ಕೇಳಿದಾಗ ಉತ್ತರಿಸಲು ಎದ್ದು ನಿಂತ ಪರಮೇಶ್ವರ್, ದೂರಿನ ಪ್ರತಿಯನ್ನು ಸದನದಲ್ಲಿ ಓದಿದರು.
ಎರಡನೇ ಪುಟದ ಎರಡನೆ ಪ್ಯಾರಾ ಓದುವಂತೆ ವಿಜಯೇಂದ್ರ ಮನವಿ ಮಾಡಿದಾಗ ಪರಮೇಶ್ವರ್ ಅದನ್ನು ಓದಿದರು. ದೂರುದಾರ ಪೃಥ್ವಿಸಿಂಗ್ ತಮ್ಮ ಮೇಲೆ ಹಲ್ಲೆ ನಡೆದಾಗ ಚನ್ನರಾಜ ಹಟ್ಟಿಹೊಳಿ ಅಲ್ಲೇ ಇದ್ದರು, ಅವರ ಅಣತಿ ಮೇರೆಗೆ ಹಲ್ಲೆ ನಡೆಯಿತು ಎಂದು ಹೇಳಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ