Karnataka bandh: ಕರ್ನಾಟಕ ಬಂದ್ -ದೇವನಹಳ್ಳಿ ವಿಮಾನ ನಿಲ್ದಾಣದೊಳಕ್ಕೆ ಪ್ರವೇಶಿಸಿದ್ದ ಐದು ಕಾರ್ಯಕರ್ತರು ಅರೆಸ್ಟ್​

Karnataka bandh: ಕರ್ನಾಟಕ ಬಂದ್ -ದೇವನಹಳ್ಳಿ ವಿಮಾನ ನಿಲ್ದಾಣದೊಳಕ್ಕೆ ಪ್ರವೇಶಿಸಿದ್ದ ಐದು ಕಾರ್ಯಕರ್ತರು ಅರೆಸ್ಟ್​

TV9 Web
| Updated By: ಸಾಧು ಶ್ರೀನಾಥ್​

Updated on: Sep 29, 2023 | 10:05 AM

karnataka bandh today: ಬೆಂಗಳೂರು ಗ್ರಾಮಾಂತರ: ಕಾವೇರಿ ವಿಚಾರಕ್ಕೆ ಕರ್ನಾಟಕ ಬಂದ್ ಹಿನ್ನೆಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ (Devanahalli airport) ಪ್ರತಿಭಟನೆ ನಡೆಸಲು ಬಂದಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ (arrested). ಆ ಐದು ಜನರು ಟಿಕೆಟ್ ಬುಕ್ ಮಾಡಿಕೊಂಡು ಏರ್ಪೋಟ್ ಒಳಗಡೆ ಪ್ರವೇಶಿಸಿದ್ದರು.

ಬೆಂಗಳೂರು ಗ್ರಾಮಾಂತರ, ಸೆಪ್ಟೆಂಬರ್​ 29: ಕಾವೇರಿ ವಿಚಾರಕ್ಕೆ ಕರ್ನಾಟಕ ಬಂದ್ (karnataka bandh today) ಹಿನ್ನೆಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ (Devanahalli airport) ಪ್ರತಿಭಟನೆ ನಡೆಸಲು ಬಂದಿದ್ದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ (arrested). ಆ ಐದು ಜನರು ಟಿಕೆಟ್ ಬುಕ್ ಮಾಡಿಕೊಂಡು ಏರ್ಪೋಟ್ ಒಳಗಡೆ ಪ್ರವೇಶಿಸಿದ್ದರು. ಬಂಧನಕ್ಕೊಳಗಾದ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಫ್ಲೈಟ್ ಬಳಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು. ಆದ್ರೆ ಪೊಲೀಸರು ಕೊನೆ ಕ್ಷಣದಲ್ಲಿ ಒಳಗಡೆ ಇದ್ದ ಐದು ಜನರನ್ನ ವಶಕ್ಕೆ ಪಡೆದರು. ಈ ಐದು ಜನರು‌ 09:50 ರ ಇಂಡಿಗೋ 7731 ವಿಮಾನದ ಟಿಕೆಟ್ ಬುಕ್ ಮಾಡಿದ್ದರು. ಏರ್ಪೋಟ್ ಒಳಗಡೆ ಪ್ರವೇಶ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಕಾವೇರಿ ನದಿ ನೀರು ವಿವಾದಕ್ಕೆ (Cauvery Water Dispute) ಸಂಬಂಧಿಸಿದಂತೆ ಇಂದು(ಸೆ.29) ಕರ್ನಾಟಕ ಬಂದ್ (Karnataka bandh) ಆಚರಿಸಲಾಗುತ್ತಿದ್ದು, ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಈ ಕರ್ನಾಟಕ ಬಂದ್ ಬಿಸಿ ವಿಮಾನಗಳಿಗೂ (Flights) ತಟ್ಟಿದೆ. ಹೌದು… ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ(Bengaluru) ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ರದ್ದಾಗಿವೆ. ಪ್ರಯಾಣಿಕರು ಇಲ್ಲದ ಕಾರಣ ಒಟ್ಟು 44 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ