ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ

Updated on: Jan 19, 2026 | 5:51 PM

ಐಜಿಪಿ ರಾಮಚಂದ್ರ ರಾವ್  (DGP Ramachandra rao) ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸ ಸಲ್ಲಾಪ ನಡೆಸಿದ್ದು, ಸದ್ಯ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಇನ್ನು ತಮ್ಮ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಮಚಂದ್ರ ಅವರು ಗೃಹ ಸಚಿವ ಪರಮೇಶ್ವರ್ ಭೇಟಿಗೆ ದೌಡಾಯಿಸಿದ್ದಾರೆ. ಆದ್ರೆ, ಪರಮೇಶ್ವರ್ ಭೇಟಿಗೆ ನಿರಾಕರಿಸಿದ್ದು ಸಪ್ಪೆ ಮುಖದಲ್ಲಿ ರಾಮಚಂದ್ರ ವಾಪಸ್ ಆಗಿದ್ದಾರೆ. ಇನ್ನು ಇದೇ ಡಿಜಿಪಿ ರಾಮಚಂದ್ರ ವೇಳೆ ಮಾಧ್ಯಮಗಳಿಗೆ ಪ್ರತಿಯಿಸಿದ್ದು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. 'ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ' ಎಂದು ಅವರು ಕಿಡಿಕಾರಿದ್ದಾರೆ

ಬೆಂಗಳೂರು (ಜನವರಿ 19): ಐಜಿಪಿ ರಾಮಚಂದ್ರ ರಾವ್  (DGP Ramachandra rao) ಕಚೇರಿಯಲ್ಲೇ ಮಹಿಳೆಯರೊಂದಿಗೆ ಸರಸ ಸಲ್ಲಾಪ ನಡೆಸಿದ್ದು, ಸದ್ಯ ರಾಸಲೀಲೆ ವಿಡಿಯೋ ವೈರಲ್ ಆಗಿದೆ. ಇನ್ನು ತಮ್ಮ ರಾಸಲೀಲೆ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ರಾಮಚಂದ್ರ ಅವರು ಗೃಹ ಸಚಿವ ಪರಮೇಶ್ವರ್ ಭೇಟಿಗೆ ದೌಡಾಯಿಸಿದ್ದಾರೆ. ಆದ್ರೆ, ಪರಮೇಶ್ವರ್ ಭೇಟಿಗೆ ನಿರಾಕರಿಸಿದ್ದು ಸಪ್ಪೆ ಮುಖದಲ್ಲಿ ರಾಮಚಂದ್ರ ವಾಪಸ್ ಆಗಿದ್ದಾರೆ. ಇನ್ನು ಇದೇ ಡಿಜಿಪಿ ರಾಮಚಂದ್ರ ವೇಳೆ ಮಾಧ್ಯಮಗಳಿಗೆ ಪ್ರತಿಯಿಸಿದ್ದು, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ‘ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ’ ಎಂದು ಅವರು ಕಿಡಿಕಾರಿದ್ದಾರೆ

ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ AI ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿದ ವಿಡಿಯೋ ಆಗಿದೆ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ರೀತಿಯ ಷಡ್ಯಂತ್ರ ರೂಪಿಸಿವೆ.ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿದ್ದೆ. ಇದರ ಬಗ್ಗೆ ನಾನು ವಕೀಲರ ಜೊತೆಗೆ ಮಾತನಾಡುತ್ತೇನೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ಕಚೇರಿಯಲ್ಲೇ ಮಹಿಳೆಯರ ಜತೆ ಡಿಜಿಪಿ ಸರಸ ಸಲ್ಲಾಪ: ರಾಮಚಂದ್ರ ರಾವ್​​ಗೆ ಸಂಕಷ್ಟ!