Gadag: ಹಣೆಗೆ ಇಟ್ಟಿದ್ದ ತಿಲಕ ಅಳಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಹಣೆಗೆ ತಿಲಕ ಇಟ್ಟು ಮಿಂಚುತ್ತಿದ್ದ ಸಿದ್ದರಾಮಯ್ಯ ಅವರು ವೇದಿಕೆಗೆ ಬಂದ ನಂತರ ಅದನ್ನು ಅಳಿಸಿಹಾಕಿದ್ದಾರೆ.
ಗದಗ: ಜಿಲ್ಲೆ ರೋಣ ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ (Congress Praja Dhwani Convenstion At Gadag) ಹಣೆಗೆ ತಿಲಕ ಇಟ್ಟು ಮಿಂಚುತ್ತಿದ್ದ ಸಿದ್ದರಾಮಯ್ಯ (Siddaramaiah removes tilak from his forehead) ಅವರು ವೇದಿಕೆಗೆ ಬಂದ ನಂತರ ಅದನ್ನು ಅಳಿಸಿಹಾಕಿದ್ದಾರೆ. ಸಮಾವೇಶದ ಆರಂಭದಲ್ಲಿ ಕುಂಕುಮ ಹಚ್ವಿಕೊಂಡು ರಾರಾಜಿಸಿದ್ದ ಸಿದ್ದರಾಮಯ್ಯ, ಕೆಲವೇ ಹೊತ್ತಿನಲ್ಲಿ ವೇದಿಕೆ ಮೇಲೆ ಮುಖ ಒರಸಿಕೊಳ್ಳುತ್ತಾ ಕುಂಕುಮ ಅಳಿಸಿಕೊಂಡರು. ಮಾತ್ರವಲ್ಲದೆ, ಕಾಂಗ್ರೆಸ್ ಮುಖಂಡ ಪ್ರಕಾಶ್ ರಾಠೋಡ ಭರ್ಜರಿ ಭಾಷಣ ಮಾಡುತ್ತಿದ್ದರೆ ಇತ್ತ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಭರ್ಜರಿ ನಿದ್ದೆಗೆ ಜಾರಿದ ಪ್ರಸಂಗವೂ ನಡೆಯಿತು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Feb 28, 2023 04:52 PM