Karnataka Elections: ಜಾತಿ ಜನಗಣತಿಗೆ ಒತ್ತಾಯಿಸಿದ ರಾಹುಲ್ ಗಾಂಧಿ; ಚುನಾವಣೆಗೆ ಕಾಂಗ್ರೆಸ್ ತಂತ್ರ?

Karnataka Elections: ಜಾತಿ ಜನಗಣತಿಗೆ ಒತ್ತಾಯಿಸಿದ ರಾಹುಲ್ ಗಾಂಧಿ; ಚುನಾವಣೆಗೆ ಕಾಂಗ್ರೆಸ್ ತಂತ್ರ?

ಕಿರಣ್​ ಐಜಿ
|

Updated on: Apr 20, 2023 | 5:30 PM

ಸುಮಾರು 60 ವರ್ಷಗಳಿಂದ ಜಾತಿ ಜನಗಣತಿ ವಿರುದ್ಧ ನಿಲುವು ಹೊಂದಿದ್ದ ಕಾಂಗ್ರೆಸ್ 2011ರಲ್ಲಿ ಅದರ ಪರ ನಿಂತಿತ್ತು. ಈ ಸಮೀಕ್ಷೆ ಪೂರ್ಣಗೊಳಿಸಲು 5 ವರ್ಷಗಳೇ ಬೇಕಾಯಿತು. ಅದಕ್ಕಾಗಿ ₹4,000 ಕೋಟಿ ಖರ್ಚು ಮಾಡಿದ್ದರೂ ತಾಂತ್ರಿಕ ದೋಷದಿಂದಾಗಿ ಅದು ಯಾವತ್ತೂ ಪ್ರಕಟವಾಗಲೇ ಇಲ್ಲ.

2015ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಜಾತಿ ಜನಗಣತಿ ಆರಂಭಿಸಿದ್ದರು. ಆದರೆ 2018ರ ವಿಧಾನಸಭಾ ಚುನಾವಣೆವರೆಗೂ ಅದನ್ನು ಬಹಿರಂಗ ಪಡಿಸಲಿಲ್ಲ. ಹೀಗೆ ಜಾತಿ ಜನಗಣತಿಯನ್ನು ಬಿಡುಗಡೆ ಮಾಡಿದರೆ ಇದು ಅವರ ಪಕ್ಷದ ಅವಕಾಶಗಳಿಗೆ ವಿರುದ್ಧವಾಗಿ ಕೆಲಸ ಮಾಡಬಹುದು ಎಂದು ಅವರು ಭಾವಿಸಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನು ಕೆಲವೇ ದಿನ ಉಳಿದಿರುವಾಗ ರಾಹುಲ್ ಗಾಂಧಿ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿದ್ದಾರೆ. ಸುಮಾರು 60 ವರ್ಷಗಳಿಂದ ಜಾತಿ ಜನಗಣತಿ ವಿರುದ್ಧ ನಿಲುವು ಹೊಂದಿದ್ದ ಕಾಂಗ್ರೆಸ್ 2011ರಲ್ಲಿ ಅದರ ಪರ ನಿಂತಿತ್ತು. ಈ ಸಮೀಕ್ಷೆ ಪೂರ್ಣಗೊಳಿಸಲು 5 ವರ್ಷಗಳೇ ಬೇಕಾಯಿತು. ಅದಕ್ಕಾಗಿ ₹4,000 ಕೋಟಿ ಖರ್ಚು ಮಾಡಿದ್ದರೂ ತಾಂತ್ರಿಕ ದೋಷದಿಂದಾಗಿ ಅದು ಯಾವತ್ತೂ ಪ್ರಕಟವಾಗಲೇ ಇಲ್ಲ. ಆದರೆ ರಾಹುಲ್ ಗಾಂಧಿ ಈಗ 2011ರ ಜಾತಿ ಜನಗಣತಿಯನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.