Karnataka Assembly Polls 2023: ಕೊನೆಗೂ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದರು, ಪದ್ಮನಾಭನಗರದಿಂದ ಅಲ್ಲ, ಕನಕಪುರ ಕ್ಷೇತ್ರದಿಂದ!

Karnataka Assembly Polls 2023: ಕೊನೆಗೂ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದರು, ಪದ್ಮನಾಭನಗರದಿಂದ ಅಲ್ಲ, ಕನಕಪುರ ಕ್ಷೇತ್ರದಿಂದ!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 20, 2023 | 4:31 PM

ಬಿಜೆಪಿ ತಂತ್ರಗಾರಿಕೆ ನಡೆಸುತ್ತಿರುವ ಸುಳಿವು ಕಾಂಗ್ರೆಸ್ ಗೆ ಸಿಕ್ಕಿತ್ತು, ಆದರೆ ತಮ್ಮ ಪಕ್ಷ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಬದ್ಧವಾಗಿದೆ ಎಂದು ಸುರೇಶ್ ಹೇಳಿದರು.

ರಾಮನಗರ: ಡಿಕೆ ಸುರೇಶ್ (DK Suresh) ಬೆಂಗಳೂರಿನ ಪದ್ಮನಾಭನಗರದಿಂದ ನಾಮಪತ್ರ ಸಲ್ಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು, ಅದರೆ ಎಲ್ಲರ ನಿರೀಕ್ಷೆಯನ್ನು ಬುಡಮೇಲು ಮಾಡಿ ಅವರು ಕನಕಪುರ ಕ್ಷೇತ್ರದಿಂದ (Kanakapura constituency) ಕಾಂಗ್ರೆಸ್ ಆಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಿಮಗೆ ಗೊತ್ತಿದೆ, ಮೂರು ದಿನಗಳ ಹಿಂದೆಯೇ ಅವರ ಸಹೋದರ ಡಿಕೆ ಶಿವಕುಮಾರ್ (DK Suresh) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಯಾಕೆ ಹೀಗೆ, ಏನಿದರ ಹಿಂದಿನ ಮರ್ಮ ಅಂತ ರಾಮನಗರದ ಟಿವಿ9 ವರದಿಗಾರ ಸುರೇಶ್ ಅವರನ್ನು ಕೇಳಿದಾಗ, ಬಿಜೆಪಿ ಯಾವುದೇ ರೀತಿಯ ಕುತಂತ್ರ ನಡೆಸಬಹುದಾಗಿದೆ, ಅವರ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ನಾಮಪತ್ರ ಸಲ್ಲಿಸಿರುವುದಾಗಿ ಹೇಳಿದರು. ಬಿಜೆಪಿ ತಂತ್ರಗಾರಿಕೆ ನಡೆಸುತ್ತಿರುವ ಸುಳಿವು ಕಾಂಗ್ರೆಸ್ ಗೆ ಸಿಕ್ಕಿತ್ತು, ಆದರೆ ತಮ್ಮ ಪಕ್ಷ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಬದ್ಧವಾಗಿದೆ ಎಂದು ಸುರೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ