Old woman’s ordeal: ವೃದ್ಧಾಪ್ಯ ವೇತನ ಪಡೆಯಲು ಒಡಿಷಾದ 70 ವರ್ಷದ ಅಶಕ್ತ ವೃದ್ಧೆಯೊಬ್ಬರು ಕುರ್ಚಿಯ ನೆರವಿನಿಂದ ಹಲವು ಕಿಮೀ ನಡೆಯಬೇಕು
ಸೂರ್ಯ ಹರಿಜನ್ ವೃದ್ಧಾಪ್ಯ ವೇತನ ಪಡೆಯಲು ಎದುರಿಸುತ್ತಿರುವ ಯಾತನೆ, ಶ್ರಮ ಪುನರಾವರ್ತನೆಯಾಗದ ಹಾಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬ್ಯಾಂಕ್ ಮ್ಯಾನೇಜರ್ ಆಶ್ವಾಸನೆ ನೀಡುತ್ತಾರೆ.
ನವರಂಗಪುರ (ಒಡಿಷಾ): ಈ ವೃದ್ಧೆಯ ಪಾಡು ಗಮನಿಸಿ. ಒಡಿಷಾದ ನವರಂಗಪುರ ಜಿಲ್ಲೆಯ ನಿವಾಸಿಯಾಗಿರುವ 70-ವರ್ಷ ವಯಸ್ಸಿನ ಸೂರ್ಯ ಹರಿಜನ್ (Surya Harijan), ತಮ್ಮ ವೃದ್ಧಾಪ್ಯ ವೇತನ ಪಡೆಯಲು ಸುಡುಬಿಸಿಲಿನಿಂದ ಕಾದು ಕೆಂಡದಂತಾಗಿರುವ ರಸ್ತೆಯ ಮೇಲೆ ಬರಿಗಾಲಲ್ಲಿ ಒಂದು ಮುರುಕಲು ಕುರ್ಚಿಯ (broken chair) ನೆರವಿನೊಂದಿಗೆ ಹಲವಾರು ಕಿಮೀಗಳವರೆಗೆ ನಡೆದು ಬ್ಯಾಂಕ್ ತಲುಪಬೇಕು. ಮೊದಲೆಲ್ಲ ಸರ್ಕಾರ ವೃದ್ಧಾಪ್ಯ ವೇತನವನ್ನು (pension) ನಗದು ರೂಪದಲ್ಲಿ ನೀಡುತ್ತಿತ್ತು, ಆದರೆ ಈಗ ಭ್ರಷ್ಟಾಚಾರ ಮತ್ತು ಸೋರಿಕೆ ತಡೆಗಟ್ಟಲು ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಸೂರ್ಯ ಹರಿಜನ್ ವೃದ್ಧಾಪ್ಯ ವೇತನ ಪಡೆಯಲು ಎದುರಿಸುತ್ತಿರುವ ಯಾತನೆ, ಶ್ರಮ ಪುನರಾವರ್ತನೆಯಾಗದ ಹಾಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬ್ಯಾಂಕ್ ಮ್ಯಾನೇಜರ್ ಆಶ್ವಾಸನೆ ನೀಡುತ್ತಾರೆ.
‘ನಡೆಯಲು ಕೂಡ ಶಕ್ತರಲ್ಲದ ಮಹಿಳೆಯೊಬ್ಬರು ತಮ್ಮ ವೃದ್ಧಾಪ್ಯ ವೇತನ ಪಡೆಯಲು ನಮ್ಮ ಶಾಖೆವರೆಗೆ ನಡೆದುಬರಬೇಕಿದೆ. ಬಯೋಮೆಟ್ರಿಕ್ ನಲ್ಲಿ ಅವರ ಫಿಂಗರ್ ಪ್ರಿಂಟ್ ಮ್ಯಾಚ್ ಆಗುತ್ತಿರಲಿಲ್ಲ. ಆದರೆ, ಈಗ ಆ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಇನ್ನು ಮುಂದೆ ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ,’ ಎಂದು ಬ್ಯಾಂಜ್ ಮ್ಯಾನೇಜರ್ ಅನಿಲ್ ಕುಮಾರ್ ಮೆಹೆರ್ ಹೇಳುತ್ತಾರೆ.
ಇದನ್ನೂ ಓದಿ: Bilawal Bhutto: ಮೇ4ರಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾರತಕ್ಕೆ ಭೇಟಿ
ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಯೋವೃದ್ಧರು ತಮ್ಮ ವೃದ್ಧಾಪ್ಯ ವೇತನ ಪಡೆಯಲು ಬ್ಯಾಂಕ್ ಶಾಖೆವರೆಗೆ ನಡೆದು ಹೋಗದಷ್ಟು ಅಶಕ್ತರಾಗಿದ್ದರೆ, ತಮ್ಮ ಅಸಹಾಯಕತೆಯನ್ನು ಜೀವನ ಪ್ರಮಾಣ ಪತ್ರದ ಒಂದು ಪ್ರತಿಯನ್ನು ಬ್ಯಾಂಕಿಗೆ ಸಲ್ಲಿಸುವ ಮೂಲಕ ನಿವೇದನೆ ಮಾಡಿಕೊಳ್ಳಬಹುದು ಇಲ್ಲವೇ ಜೀವನ್ ಪ್ರಮಾಣ ವೆಬ್ಸೈಟ್ ನಲ್ಲಿ ಸಿಗುವ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಅನ್ನು ಬಳಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ