ವೃದ್ಧಾಪ್ಯ ವೇತನಕ್ಕಾಗಿ ತೆರಳುತ್ತಿದ್ದ ವೃದ್ಧೆಗೆ ಡಿಕ್ಕಿ ಹೊಡೆದ ಶಾಸಕ ಬಸವರಾಜ ದಡೇಸುಗೂರು ಅವರಿದ್ದ ಕಾರು, ಚಿಕಿತ್ಸೆ ಫಲಿಸದೆ ವೃದ್ಧೆ ಸಾವು
Basavaraj Dadesugur: ಮೈಲಾಪುರ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ವೃದ್ಧೆಗೆ ಶಾಸಕ ಬಸವರಾಜ ದಡೇಸುಗೂರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಕೊಪ್ಪಳ: ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು(MLA Basavaraj Dadesugur) ಅವರ ಕಾರು ಡಿಕ್ಕಿಯಾಗಿ ಮರಿಯಮ್ಮ ನಾಯಕ(70) ಎಂಬ ವೃದ್ಧೆ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಕ್ರಾಸ್ ಬಳಿ ನಡೆದಿದೆ. ನಿನ್ನೆ ಮೈಲಾಪುರ ಕ್ರಾಸ್ ಬಳಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಲಾಪುರ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ವೃದ್ಧೆಗೆ ಶಾಸಕ ಬಸವರಾಜ ದಡೇಸುಗೂರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ವೃದ್ಧೆಗೆ ಡಿಕ್ಕಿ ಹೊಡೆದಿದ್ದಾನೆ. ಗಾಯಾಳು ವೃದ್ಧೆಯನ್ನ ಕಾರಟಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ವೃದ್ಧೆ ಮರಿಯಮ್ಮಗೆ ಚಿಕಿತ್ಸೆ ಕೊಡಿಸಿ ಶಾಸಕ ದಡೇಸುಗೂರು ಅಲ್ಲಿಂದ ತೆರಳಿದ್ದರು. ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ವೃದ್ಧೆಯನ್ನ ಬಳ್ಳಾರಿ ವಿಮ್ಸ್ಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ವೃದ್ಧೆ ಮರಿಯಮ್ಮ ನಾಯಕ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ನಭಾ ನಟೇಶ್ಗೆ ಭೀಕರ ಅಪಘಾತ
ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಶಾಸಕರು ಆಕೆಗೆ ಏನಾಯ್ತು ಎಂದು ನೋಡೋ ಗೋಜಿಗೂ ಹೋಗಿಲ್ವಂತೆ. ಬಡ ಜೀವವೊಂದು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ರು ಶಾಸಕರು ಮಾತ್ರ ಅಲ್ಲಿಂದ ಕಾಲ್ಕಿತ್ತಿದ್ದರು. ಅಲ್ಲದೆ ಏನು ಆಗಿಯೇ ಇಲ್ಲವೆಂಬಂತೆ ವರ್ತಿಸಿದ್ದಾರೆ.ಆದ್ರೆ ಮೃತ ಮರಿಯಮ್ಮ ಮನೆಗೆ ಬರದ ಹಿನ್ನಲೆ ಆಕೆಯ ಮೊಮ್ಮಗ ಹುಡುಕಾಡಿದಾಗ ವಿಷಯಗ ಗೊತ್ತಾಗಿದೆ. ಕೂಡಲೆ ಆಸ್ಪತ್ರೆಗೆ ಬಂದು ನೋಡಿದ್ರೆ, ಶಾಸಕರ ಕಾರು ಡಿಕ್ಕಿ ಹೊಡೆದು ಈ ರೀತಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆದ್ರೆ ಶಾಸಕರು ಮಾತ್ರ ಅಲ್ಲಿ ಇರಲಿಲ್ಲ. ತನ್ನ ಕಾರು ಡಿಕ್ಕಿ ಹೊಡೆದ್ರು ಬಡವರ ನೆರವಿಗೆ ಬರದ ಶಾಸಕರ ವಿರುದ್ದ ಸಂಬಂಧಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೂಲತ: ಕಾರಟಗಿ ತಾಲೂಕಿನ ಚಳ್ಳೂರು ಗ್ರಾಮದ ನಿವಾಸಿಯಾದ ಮರಿಯಮ್ಮ, ತನ್ನ ಮಾಸಿಕ ಪಿಂಚಿಣಿ ತೆಗೆದುಕೊಂಡು ಮರಳಿ ಮೈಲಾಪುರ ಗ್ರಾಮಕ್ಕೆ ಬಂದು ಬಸ್ ನಿಲ್ದಾಣ ಕ್ರಾಸ್ ಮಾಡುವಾಗ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಸಂಚರಿಸುತ್ತಿರುವ ಕಾರ್ ಡಿಕ್ಕಿ ಹೊಡೆದಿದೆ. ಇನ್ನು ನಾಯಿಯೊಂದು ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಶಾಸಕರ ವಾಹನ ಚಾಲಕ ಡಿಕ್ಕಿಹೊಡೆದಿರುವುದಾಗಿ ಜನ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ದಡೇಸುಗೂರು ವಾಹನ ಡಿಕ್ಕಿ ಹೊಡೆದ್ರೂ, ಪ್ರಕರಣದಲ್ಲಿ ಶಾಸಕನ ಹಾಗೂ ಆತನ ವಾಹನ ಚಾಲಕನ ಹೆಸರು ಇಲ್ಲ. ಆದ್ರೆ ಶಾಸಕರ ಬಸವರಾಜ ದಡೇಸೂಗರು ಮಾತ್ರ ತನ್ನ ಕಾರು ವೃದ್ದೆಗೆ ಟಚ್ ಆಗಿಲ್ಲ. ಬದಲಿಗೆ ನಾಯಿಯೊಂದು ಅಡ್ಡ ಬಂದು, ಅದು ಆಕೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಳು. ನಾವೇ ಆಕೆಯನ್ನ ಮಾತನಾಡಿಸಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೆ. ಒಳ್ಳೆಯದ್ದು ಮಾಡಿದ್ದೆ ತಪ್ಪಾಗಿದೆ ಎನ್ನುತ್ತಿದ್ದಾರೆ. ಅಲ್ಲದೇ ಆ ಕುಟುಂಬಕ್ಕೆ ಸಹಾಯ ಮಾಡ್ತಿನಿ ಎನ್ನುತ್ತಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:23 pm, Wed, 11 January 23