Karnataka Assembly Polls: ಕುಮಾರಸ್ವಾಮಿ ಸಾಧನೆ ಶೂನ್ಯ, ಅದನ್ನು ಮುಚ್ಚಿಹಾಕಲು ನನ್ನ ಬಗ್ಗೆ ಮಾತಾಡುತ್ತಾ ಕ್ಷುಲ್ಲಕ ರಾಜಕಾರಣ ಮಾಡುತ್ತಾರೆ: ಸುಮಲತಾ ಅಂಬರೀಶ್
ಕುಮಾರಸ್ವಾಮಿಯವರು ಮಂಡ್ಯ ಜಿಲ್ಲೆಗೆ ಅವರು ಏನನ್ನೂ ಮಾಡಿಲ್ಲ, ಮುಖ್ಯಮಂತ್ರಿಯಾಗಿ ಅವರ ಸಾಧನೆ ಶೂನ್ಯ ಎಂದು ಸುಮಲತಾ ಹೇಳಿದರು,
ಮಂಡ್ಯ: ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಜೆಡಿಎಸ್ ಪಕ್ಷದ ನಾಯಕರು ಕ್ಷುಲ್ಲಕ ರಾಜಕಾರಣ (petty politics) ಮಾಡುತ್ತಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಇಂದು ನಗರದಲ್ಲಿ ಜರಿದರು. ಪತ್ರಿಕಾ ಗೋಷ್ಟಿಯೊಂದರಲ್ಲಿ ಮಾತಾಡಿದ ಸುಮಲತಾ, ಕಳೆದ 5 ವರ್ಷಗಳಲ್ಲಿ ಒಂದು ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಸಾಧನೆ ಶೂನ್ಯ. ಮಂಡ್ಯ ಜಿಲ್ಲೆಗೆ ಅವರು ಏನನ್ನೂ ಮಾಡಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡದ ಕಾರಣ ಹೇಳಿಕೊಳ್ಳಲು ಅವರ ಬಳಿ ಏನೂ ಇಲ್ಲ. ಹಾಗಾಗೇ ಅದನ್ನು ಮುಚ್ಚಿಹಾಕಲು ಸುಖಾಸುಮ್ಮನೆ ತಮ್ಮನ್ನು ಟಾರ್ಗೆಟ್ ಮಾಡುತ್ತಾರೆ ಎಂದು ಸಂಸದೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos