Karnataka Assembly Polls 2023: ಹಾಸನಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಹೆಚ್ ಡಿ ದೇವೇಗೌಡ ಅಕ್ಷರಶಃ ಧೂಳೆಬ್ಬಿಸಿದರು!
ಹಾಸನದಲ್ಲಿ ಸ್ವರೂಪ್ ಪ್ರಕಾಶ್ ಪರ ಮತಯಾಚನೆಗೆ ಅವರ ಇಡೀ ಕುಟುಂಬ; ಮಕ್ಕಳು-ಮೊಮ್ಮಕ್ಕಳು, ಸೊಸೆಯಂದಿರು ಇಳಿದಿರುವುದು ವಿಶೇಷ.
ಹಾಸನ: ಸಿನಿಮಾ ಧೂಳೆಬ್ಬಿಸುತ್ತಿದೆ, ಅಮೋಘ ಬ್ಯಾಟಿಂಗ್ ಮೂಲಕ ಧೂಳೆಬ್ಬಿಸಿದ ವಿರಾಟ್ ಕೊಹ್ಲಿ ಅಂತ ಹೇಳೋದನ್ನು ನಾವು ಕೇಳಿತ್ತಿರುತ್ತೇವೆ. ಧೂಳೆಬ್ಬಿಸುವ ಪದವನ್ನು ಹೀಗೆ ಕ್ರಿಯಾ ವಿಶೇಷಣವಾಗಿ ಬಳಸೋದುಂಟು. ಬೆಂಗಳೂರಿನಿಂದ ಹಾಸನಕ್ಕೆ ಚುನಾವಣಾ ಪ್ರಚಾರಕ್ಕೆಂದು ಹೆಲಿಕಾಪ್ಟರ್ ನಲ್ಲಿ (helicopter) ಆಗಮಿಸಿದ ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ (HD Devegowda) ಅಕ್ಷರಶಃ ಧೂಳೆಬ್ಬಿಸಿದರು! ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ಎದ್ದ ಧೂಳು ಒಂದೆರಡು ನಿಮಿಷಗಳ ಕಾಲ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆಶ್ರಯಕ್ಕಾಗಿ ಓಡುವ ಸ್ಥಿತಿ ನಿರ್ಮಿಸಿತ್ತು. ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ದೇವೇಗೌಡ ಇದೇ ಮೊದಲ ಬಾರಿಗೆ ಬಹಿರಂಗ ಸಭೆಯೊಂದರಲ್ಲಿ ಪಾಲ್ಗೊಂಡಿದ್ದು. ಹಾಸನದಲ್ಲಿ ಸ್ವರೂಪ್ ಪ್ರಕಾಶ್ (Swaroop Prakash) ಪರ ಮತಯಾಚನೆಗೆ ಅವರ ಇಡೀ ಕುಟುಂಬ; ಮಕ್ಕಳು-ಮೊಮ್ಮಕ್ಕಳು, ಸೊಸೆಯಂದಿರು ಇಳಿದಿರುವುದು ವಿಶೇಷ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ