ಮಂಡ್ಯ: ‘ಸ್ಪಷ್ಟವಾಗಿ ಹೇಳುತ್ತಿದ್ದೇನೆ ನಾನು ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣ ಮಾಡಲ್ಲ. ಇದುವರೆಗೂ ಯಾರ ಹತ್ತಿರವಾದರೂ ನನ್ನ ಮಗನಿಗೆ ನಿಮ್ಮ ಪಕ್ಷದಲ್ಲಿ ಟಿಕೆಟ್ ಕೊಡಿ ಎಂದು ಕೇಳಿದರೇ ನಾನು ಅಂಬರೀಶ್ ಪತ್ನಿ ಅಂತ ಹೇಳಿಕೊಳ್ಳೋಕೆ ಲಾಯಕ್ಕಿಲ್ಲವೆಂದಿದ್ದಾರೆ. ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಶ್(Sumalatha Ambareesh) ‘ನಾನು ರಾಜಕಾರಣದಲ್ಲಿ ಇರುವವರೆಗೂ ನನ್ನ ಮಗ ರಾಜಕೀಯಕ್ಕೆ ಬರಲ್ಲ, ನನ್ನ ಮಗ ಕೂಡ ತಂದೆಯಂತೆ ಅವರ ದಾರಿಯಲ್ಲಿ ನಡೆದುಕೊಂಡು ಬರಬೇಕು ಎಂಬುದು ಅವನ ಆಸೆ ಎಂದು ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ