ಅಂಬರೀಶ್ ಅಣ್ಣನವರಿಗೆ ಸಿಕ್ಕಷ್ಟೇ ಪ್ರೀತಿ ಸುಮಲತಾರಿಗೂ ಸಿಗುತ್ತಿದೆ, ಅವರ ಬೆಂಬಲದಿಂದ ಬಿಜೆಪಿಗೆ ಬಹಳ ಲಾಭವಾಗಲಿದೆ: ಪ್ರತಾಪ್ ಸಿಂಹ

ಅಂಬರೀಶ್ ಅಣ್ಣನವರಿಗೆ ಸಿಕ್ಕಷ್ಟೇ ಪ್ರೀತಿ ಸುಮಲತಾರಿಗೂ ಸಿಗುತ್ತಿದೆ, ಅವರ ಬೆಂಬಲದಿಂದ ಬಿಜೆಪಿಗೆ ಬಹಳ ಲಾಭವಾಗಲಿದೆ: ಪ್ರತಾಪ್ ಸಿಂಹ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 10, 2023 | 4:23 PM

ದೊಡ್ಡ ನಟ ಮತ್ತು ಅಷ್ಟೇ ದೊಡ್ಡ ನಾಯಕರಾಗಿದ್ದ ಅಂಬರೀಶ್ ಅವರಿಗೆ ಮಂಡ್ಯದ ಜನರಿಂದ ಸಿಕ್ಕಷ್ಟೇ ಪ್ರೀತಿ, ಅಭಿಮಾನ ಸುಮಲತಾ ಅವರಿಗೂ ಸಿಕ್ಕಿದೆ. ಹಾಗಾಗಿ ಅವರು ಬಿಜೆಪಿಯನ್ನು ಬೆಂಬಲಿಸಲು  ನಿರ್ಧರಿಸಿರುವುದು ಪಕ್ಷಕ್ಕೆ ಭಾರೀ ಲಾಭವಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮೈಸೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh,) ಅವರು ಬಿಜೆಪಿಗೆ ಬೆಂಬಲ ಸೂಚಿಸಿರುವುದನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ (Pratap Simha) ಸ್ವಾಗತಿಸಿದ್ದಾರೆ. ಮೈಸೂರಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಸಂಸದರು, ದೊಡ್ಡ ನಟ ಮತ್ತು ಅಷ್ಟೇ ದೊಡ್ಡ ನಾಯಕರಾಗಿದ್ದ ಅಂಬರೀಶ್ ಅವರಿಗೆ ಮಂಡ್ಯದ ಜನರಿಂದ ಸಿಕ್ಕಷ್ಟೇ ಪ್ರೀತಿ, ಅಭಿಮಾನ ಸುಮಲತಾ ಅವರಿಗೂ ಸಿಕ್ಕಿದೆ. ಹಾಗಾಗಿ ಅವರು ಬಿಜೆಪಿಯನ್ನು ಬೆಂಬಲಿಸಲು  ನಿರ್ಧರಿಸಿರುವುದು ಪಕ್ಷಕ್ಕೆ ಭಾರೀ ಲಾಭವಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದರು. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ (national highway) ಸಂಬಂಧಿಸಿದಂತೆ ಈ ಇಬ್ಬರು ಸಂಸದರು ಪರಸ್ಪರ ಟೀಕಾ ಪ್ರಹಾರ ನಡೆಸಿದ್ದನ್ನು ಕನ್ನಡಿಗರು ಚೆನ್ನಾಗಿ ನೆನಪಿಟ್ಟುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 10, 2023 04:22 PM