Prajadhvani Yatre; ಎದೆ ಬಗೆದು ಸೀಳಿದರೆ ಸಿದ್ದರಾಮಯ್ಯ ಕಾಣುತ್ತಾರೆ ಅಂತ ಹಿಂದೆ ಎಂಟಿಬಿ ನಾಗರಾಜ್ ಹೇಳಿದ್ದರು: ಸಿದ್ದರಾಮಯ್ಯ

Prajadhvani Yatre; ಎದೆ ಬಗೆದು ಸೀಳಿದರೆ ಸಿದ್ದರಾಮಯ್ಯ ಕಾಣುತ್ತಾರೆ ಅಂತ ಹಿಂದೆ ಎಂಟಿಬಿ ನಾಗರಾಜ್ ಹೇಳಿದ್ದರು: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 10, 2023 | 5:49 PM

ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಓಪನ್ನಾಗಿ ಲಂಚದ ಬಗ್ಗೆ ಮಾತಾಡಿದ್ದರು ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ದಾವಣಗೆರೆ: ಜಿಲ್ಲೆಯ ಚನ್ನಗಿರಿಯಲ್ಲಿ ಪ್ರಜಾಧ್ವನಿ ಯಾತ್ರೆ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತಾಡಿದ ಸಿದ್ದರಾಮಯ್ಯನವರು (Siddaramaiah) ಎಂಟಿಬಿ ನಾಗರಾಜ್ (MTB Nagaraj) ಅವರ ಕಾಲೆಳೆದರು. ನಾಗರಾಜ್ ಮೊದಲೆಲ್ಲ ತನ್ನ ಎದೆ ಬಗೆದು ನೋಡಿದರೆ ಸಿದ್ದರಾಮಯ್ಯನೇ ಕಾಣ್ತಾರೆ ಅಂತ ಹೇಳುತ್ತಿದ್ದವರು ಕೊನೆಗೆ ಹಣದಾಸೆಗೆ ಬಿದ್ದು ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿ ಸೇರಿದರು ಅಂತ ಹೇಳಿದರು. ಮುಂದುವರಿದು ನಾಗರಾಜ್ ಬಗ್ಗೆಯೇ ಮಾತಾಡಿದ ಸಿದ್ದರಾಮಯ್ಯ, ನಂದೀಶ್ (Nandeesh) ಹೆಸರಿನ ಪೊಲೀಸ್ ಇನ್ಸ್ ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಅವರು (ನಾಗರಾಜ್) ಒಬ್ಬ ಪೊಲೀಸ್ ಆಧಿಕಾರಿ ಜೊತೆ ಮಾತಾಡುವಾಗ, ‘ಪಾಪ, ನಂದೀಶ್ 70-80 ಲಕ್ಷ ರೂ. ಸಾಲ ಮಾಡಿ ಕೆ ಆರ್ ಪುರಂಗೆ ಟ್ರಾನ್ಸ್ಫರ್ ಮಾಡಿಸಿಕೊಂಡಿದ್ದ, ಆದರೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಿದ್ದರು,’ ಎಂದರು. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು ಓಪನ್ನಾಗಿ ಲಂಚದ ಬಗ್ಗೆ ಮಾತಾಡಿದ್ದರು ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ