Volleyball: ಬದನವಾಳು ಗ್ರಾಮದಲ್ಲಿ ಯುವಕರ ಜೊತೆ ವಾಲಿಬಾಲ್ ಆಡಿ ನಲಿದಾಡಿದ ಸಿದ್ದರಾಮಯ್ಯ
ಭಾರತ್ ಜೋಡೋ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗಾಗಿ ಸಿದ್ದರಾಮಯ್ಯ ಅವರು ಗ್ರಾಮಕ್ಕೆ ತೆರಳಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಸೇರಿದಂತೆ ಹಲವ ನಾಯಕರು ಅವರಿಗೆ ಸಾಥ್ ನೀಡಿದ್ದರು. ಈ ವೇಳೆ ಯುವಕರ ಜೊತೆ ಸೇರಿ ವಾಲಿಬಾಲ್ ಆಡಿದರು.
ಮೈಸೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಯಾವುದೇ ಹಮ್ಮುಬಿಮ್ಮು ಇಲ್ಲದೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ (Badanavalu) ಇಂದು ಯುವಕರ ಜೊತೆ ವಾಲಿಬಾಲ್ (Volleyball) ಆಡಿ ನಲಿದಾಡಿದರು!
ಭಾರತ್ ಜೋಡೋ (Bharat Jodo) ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗಾಗಿ ಸಿದ್ದರಾಮಯ್ಯ ಅವರು ಗ್ರಾಮಕ್ಕೆ ತೆರಳಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಸೇರಿದಂತೆ ಹಲವ ನಾಯಕರು ಅವರಿಗೆ ಸಾಥ್ ನೀಡಿದ್ದರು. ಈ ವೇಳೆ ಯುವಕರ ಜೊತೆ ಸೇರಿ ವಾಲಿಬಾಲ್ ಆಡಿದರು.