ರಾಜ್ಯ ನೌಕರರಿಗೆ ಎಷ್ಟು ಸಿಗಲಿದೆ ವೇತನ? 7ನೇ ವೇತನ ಆಯೋಗ ಶಿಫಾರಸು ಜಾರಿಗೆ ಬಗ್ಗೆ ಅಧ್ಯಕ್ಷ ಬಿಚ್ಚಿಟ್ಟ ಮಾಹಿತಿ

ಸರ್ಕಾರಿ ನೌಕರರ ಬೇಡಿಕೆ ಈಡೇರಿಸದಿದ್ದರೆ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌ ಷಡಾಕ್ಷರಿ ಅವರು ರಾಜ್ಯ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ.

ರಾಜ್ಯ ನೌಕರರಿಗೆ ಎಷ್ಟು ಸಿಗಲಿದೆ ವೇತನ? 7ನೇ ವೇತನ ಆಯೋಗ ಶಿಫಾರಸು ಜಾರಿಗೆ ಬಗ್ಗೆ ಅಧ್ಯಕ್ಷ ಬಿಚ್ಚಿಟ್ಟ ಮಾಹಿತಿ
|

Updated on:Jul 15, 2024 | 10:32 PM

ಬೆಂಗಳೂರು, (ಜುಲೈ 15): ರಾಜ್ಯದ ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕರ್ನಾಟಕದಲ್ಲಿ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆಯು ಒಪ್ಪಿಗೆ ಸೂಚಿಸಿದೆ. ಆಗಸ್ಟ್‌ 1ರಿಂದಲೇ ಏಳನೇ ವೇತನ ಆಯೋಗದ ಜಾರಿಗೆ ಕರ್ನಾಟಕ ಸರ್ಕಾರ (Karnataka Government) ತೀರ್ಮಾನ ಮಾಡಿದೆ. ಇದರಿಂದಾಗಿ ರಾಜ್ಯದ ಲಕ್ಷಾಂತರ ನೌಕರರ ವೇತನ (Karnataka Government Employees) ಜಾಸ್ತಿಯಾಗಲಿದೆ. ಇನ್ನು 7ನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ಇದಕ್ಕೆ  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಂಯ್ಯ, ಡಿಕೆ ಶಿವಕುಮಾರ್ ಹಾಗೂ ಹಣಕಾಸು ಇಲಾಖೆಗೆ ಕೃತಜ್ಞತೆ ಹೇಳಿದ್ದಾರೆ. ಇನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ 7ನೇ ವೇತನ ಆಯೋಗಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಕೆಲವೊಂದಿಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್: ಆ.1 ರಿಂದ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವ ತೀರ್ಮಾನ ಪ್ರಕಟಿಸಿದ ಸಿಎಂ

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Mon, 15 July 24

Follow us
ಮೊಟೊರೊಲ ಹೊಸ ಸ್ಮಾರ್ಟ್​​ಫೋನ್ G45 5G ಭಾರತದ ಮಾರುಕಟ್ಟೆಗೆ ಲಗ್ಗೆ
ಮೊಟೊರೊಲ ಹೊಸ ಸ್ಮಾರ್ಟ್​​ಫೋನ್ G45 5G ಭಾರತದ ಮಾರುಕಟ್ಟೆಗೆ ಲಗ್ಗೆ
ಮೈಸೂರಿಗೆ ಆಗಮಿಸಿದ ಗಜಪಡೆಯ ಮೊದಲ ಬ್ಯಾಚ್, ಗಮನ ಸೆಳೆಯುತ್ತಿರುವ ಅಭಿಮನ್ಯು
ಮೈಸೂರಿಗೆ ಆಗಮಿಸಿದ ಗಜಪಡೆಯ ಮೊದಲ ಬ್ಯಾಚ್, ಗಮನ ಸೆಳೆಯುತ್ತಿರುವ ಅಭಿಮನ್ಯು
ಕೊಪ್ಪಳ: ಯರಡೋಣ ಗ್ರಾಮದಲ್ಲಿರುವಂಥ ಗೂಳಿಯನ್ನು ಮೊದಲೆಲ್ಲಾದರೂ ನೋಡಿದ್ದೀರಾ?
ಕೊಪ್ಪಳ: ಯರಡೋಣ ಗ್ರಾಮದಲ್ಲಿರುವಂಥ ಗೂಳಿಯನ್ನು ಮೊದಲೆಲ್ಲಾದರೂ ನೋಡಿದ್ದೀರಾ?
ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವದಲ್ಲಿ ಯದುವೀರ್ ಭಾಗಿ
ಮಂತ್ರಾಲಯದ ರಾಯರ 353ನೇ ಆರಾಧನಾ ಮಹೋತ್ಸವದಲ್ಲಿ ಯದುವೀರ್ ಭಾಗಿ
ದರ್ಶನ್ ಪ್ರಕರಣದ ತನಿಖೆಗೆ ಈವರೆಗೆ ಖರ್ಚಾದ ಹಣ ಎಷ್ಟು?
ದರ್ಶನ್ ಪ್ರಕರಣದ ತನಿಖೆಗೆ ಈವರೆಗೆ ಖರ್ಚಾದ ಹಣ ಎಷ್ಟು?
ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ
ದೇವರ ಮನೆಯಲ್ಲಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ
ಶ್ರಾವಣ ಮಾಸದ 3ನೇ ಶುಭ ಗುರುವಾರದ ರಾಶಿಭವಿಷ್ಯ ತಿಳಿಯಿರಿ
ಶ್ರಾವಣ ಮಾಸದ 3ನೇ ಶುಭ ಗುರುವಾರದ ರಾಶಿಭವಿಷ್ಯ ತಿಳಿಯಿರಿ
ಸಿದ್ದರಾಮಯ್ಯ ಜನಪ್ರಿಯ ಮತ್ತು ಮಾಸ್ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ
ಸಿದ್ದರಾಮಯ್ಯ ಜನಪ್ರಿಯ ಮತ್ತು ಮಾಸ್ ಲೀಡರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ
ಪೋಲೆಂಡ್​ನಲ್ಲೂ ಮೊಳಗಿದ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಘೋಷಣೆ
ಪೋಲೆಂಡ್​ನಲ್ಲೂ ಮೊಳಗಿದ ಭಾರತ್ ಮಾತಾ ಕಿ ಜೈ, ಜೈ ಶ್ರೀರಾಮ್ ಘೋಷಣೆ
ಕುಮಾರಸ್ವಾಮಿಗೆ ಹೆದರಿಕೆ; ಹಾಗಾಗೇ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ: ಸಿಎಂ
ಕುಮಾರಸ್ವಾಮಿಗೆ ಹೆದರಿಕೆ; ಹಾಗಾಗೇ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ: ಸಿಎಂ