ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಎದುರು ವಸ್ತುಸ್ಥಿತಿ ಮಂಡಿಸಲು ರಾಜ್ಯ ಸರ್ಕಾರ ವಿಫಲವಾಗಿದೆ: ತೇಜಸ್ವೀ ಸೂರ್ಯ, ಸಂಸದ

|

Updated on: Aug 31, 2023 | 2:26 PM

ಆ ರಾಜ್ಯದ ರೈತರು ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಆದರೆ ನಮ್ಮ ರೈತರಿಗೆ ಒಂದು ಬೆಳೆಗೂ ನೀರು ದಕ್ಕುತ್ತಿಲ್ಲ ಎಂದು ಸೂರ್ಯ ಹೇಳಿದರು. ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದೆ, ಇದು ಹೀಗೆಯೇ ಮುಂದುವರಿದರೆ, ಮುಂದಿನ 3-4 ತಿಂಗಳು ನಂತರ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರು ನಗರಕ್ಕೆ ಕುಡಿಯಲು ನೀರಿಲ್ಲದಂತಾಗುವ ಸಾಧ್ಯತೆ ಇದೆ ಎಂದು ಸಂಸದ ತೇಜಸ್ವೀ ಸೂರ್ಯ ಹೇಳಿದರು.

ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯದ ಅದರಲ್ಲೂ ವಿಶೇಷವಾಗಿ ಕಾವೇರ ಜಲಾನಯನ ಪ್ರದೇಶದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿಜೆಪಿ ಸಂಸದ ತೇಜಸ್ವೀ ಸೂರ್ಯ (Tejasvi Surya) ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾತಾಡಿದ ಸೂರ್ಯ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಎದುರು ಎರಡು ಬಾರಿ ರಾಜ್ಯದ ರೈತರ ಸ್ಥಿತಿಯನ್ನು ವಿವರಿಸುವಲ್ಲಿ ಸರ್ಕಾರ ವಿಫಲವಾಗಿದೆ, ತಮಿಳುನಾಡು ಜಲಾಶಯಗಳಲ್ಲಿ (reservoirs) ಎಷ್ಟು ನೀರಿದೆ ಅಂತ ಡ್ರೋನ್ ಗಳ ಮೂಲಕ ಸಮೀಕ್ಷೆಯನ್ನು ನಡೆಸಿ ಪ್ರಾಧಿಕಾರ ಮತ್ತು ಸುಪ್ರೀಮ್ ಕೋರ್ಟ್ ಮುಂದೆ ಇಡಬೇಕಿತ್ತು. ಯಾಕೆಂದರೆ, ಆ ರಾಜ್ಯದ ರೈತರು ವರ್ಷಕ್ಕೆ ಮೂರು ಬೆಳೆಗಳನ್ನು ಬೆಳೆಯುತ್ತಿದ್ದಾರೆ, ಆದರೆ ನಮ್ಮ ರೈತರಿಗೆ ಒಂದು ಬೆಳೆಗೂ ನೀರು ದಕ್ಕುತ್ತಿಲ್ಲ ಎಂದು ಸೂರ್ಯ ಹೇಳಿದರು. ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದೆ, ಇದು ಹೀಗೆಯೇ ಮುಂದುವರಿದರೆ, ಮುಂದಿನ 3-4 ತಿಂಗಳು ನಂತರ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ಬೆಂಗಳೂರು ನಗರಕ್ಕೆ ಕುಡಿಯಲು ನೀರಿಲ್ಲದಂತಾಗುವ ಸಾಧ್ಯತೆ ಇದೆ ಎಂದು ಸಂಸದ ತೇಜಸ್ವೀ ಸೂರ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ