Loading video

ಆತಂಕ ಸೃಷ್ಟಿಸುತ್ತಿರುವವರನ್ನು ಬಿಟ್ಟು ಹಿಂದೂ ಕಾರ್ಯಕರ್ತರನ್ನು ಸರ್ಕಾರ ಟಾರ್ಗೆಟ್ ಮಾಡುತ್ತಿದೆ: ಪ್ರತಾಪ್ ಸಿಂಹ

Updated on: Jun 02, 2025 | 6:58 PM

ಕೇರಳದಲ್ಲಿ ಪಿಎಫ್​ಐ, ಎಸ್​ಡಿಪಿಐ ಮತ್ತು ಕೆಎಫ್​ಡಿ ಮೊದಲಾದ ಸಂಘಟನೆಗಳನ್ನು ಹಿಂದೂಗಳ ಜೊತೆ ಕ್ರಿಶ್ಚಿಯನ್ನರು ಸಹ ದ್ವೇಷಿಸುತ್ತಿದ್ದಾರೆ, ಕರಾವಳಿ ಪ್ರಾಂತ್ಯ ಕೇರಳದಂತೆ ಮಾರ್ಪಡಲು ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್ ಕಾರಣ, ಇಂಥವರನ್ನು ಹದ್ದುಬಸ್ತಿನ್ನಲ್ಲಿಡುವ ಬದಲು ನಳಿನ್ ಕುಮಾರ್ ಕಟೀಲ್, ಡಾ ಪ್ರಭಾಕರ್ ಭಟ್ ಮತ್ತು ಅರುಣ್ ಕುಮಾರ್ ಪುತ್ತಿಲ ಅವರನ್ನು ರಾಜ್ಯ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮೈಸೂರು, ಜೂನ್ 2: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕರಾವಳಿ ಪ್ರದೇಶದಲ್ಲಿ ಅತಂಕವನ್ನು ಸೃಷ್ಟಿಮಾಡುತ್ತಿರುವವರನ್ನು ಸರಿದಾರಿಗೆ ತರೋದು ಬಿಟ್ಟು ಆ ಭಾಗದಲ್ಲಿ ಭಾಷೆ-ನೆಲ-ಜಲ-ಸಂಸ್ಕೃತಿಯನ್ನು ಸಂರಕ್ಷಿಸುತ್ತಿರುವವನ್ನು ತುಳಿಯಲು ಯತ್ನಿಸುವ ಮೂಲಕ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ (Taliban Government) ತರಲು ಸಿದ್ದರಾಮಯ್ಯ ಹವಣಿಸುತ್ತಿದೆ ಎಂದು ಹೇಳಿದರು. ಕೇರಳ ಮಾದರಿಯ ಹತ್ಯೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ. ಪ್ರವೀಣ್ ನೆಟ್ಟಾರು ಕೊಲೆ ನಡೆದಾಗ ಹಂತಕರನ್ನು ಹೆಡೆಮುರಿಕಟ್ಟಿ ಜೈಲಿಗೆ ಅಟ್ಟಿದ್ದರೆ ಸುಹಾಸ್ ಶೆಟ್ಟಿಯ ಕೊಲೆ ಮತ್ತು ಸರಣಿ ಹತ್ಯೆಗಳು ನಡೆಯುತ್ತಿರಲಿಲ್ಲ, ಕರಾವಳಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣಗೊಳ್ಳುತ್ತಿರಲಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಇದನ್ನೂ ಓದಿ:   ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 02, 2025 06:56 PM