AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಗಳು-ಇನ್ಶೂರೆನ್ಸ್ ಕಂಪನಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮಹತ್ವದ ಹೆಜ್ಜೆಯಿಟ್ಟ ಆರೋಗ್ಯ ಇಲಾಖೆ

ಆಸ್ಪತ್ರೆಗಳು-ಇನ್ಶೂರೆನ್ಸ್ ಕಂಪನಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಮಹತ್ವದ ಹೆಜ್ಜೆಯಿಟ್ಟ ಆರೋಗ್ಯ ಇಲಾಖೆ

ವಿನಯ್​ ಕಾಶಪ್ಪನವರ್​
| Edited By: |

Updated on: Oct 24, 2026 | 12:22 PM

Share

ಲಕ್ಷಾಂತರ ಹಣ ಪಾವತಿಸಿ ಇನ್ಶೂರೆನ್ಸ್ ಹೊಂದಿದ್ದರೂ, ಆಸ್ಪತ್ರೆಗಳು ಮತ್ತು ಇನ್ಶೂರೆನ್ಸ್ ಕಂಪನಿಗಳ ಕಳ್ಳಾಟದಿಂದಾಗಿ ರೋಗಿಗಳು ವೈದ್ಯಕೀಯ ಬಿಲ್‌ಗಳನ್ನು ಭರಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಇಲಾಖೆಯು ಇನ್ಶೂರೆನ್ಸ್ ಕಂಪನಿಗಳೊಂದಿಗೆ ಮಹತ್ವದ ಸಭೆ ನಡೆಸಿದ್ದು, ರೋಗಿಗಳಿಗೆ ಸಂಪೂರ್ಣ ಪರಿಹಾರ ಒದಗಿಸಲು ಮುಂದಾಗಿದೆ.

ಬೆಂಗಳೂರು, ಅ.24: ಕರ್ನಾಟಕದಲ್ಲಿ ಆರೋಗ್ಯ ಇನ್ಶೂರೆನ್ಸ್ ಹೊಂದಿರುವ ರೋಗಿಗಳು ಸಹ ಚಿಕಿತ್ಸಾ ವೆಚ್ಚಕ್ಕಾಗಿ ಕೈಯಿಂದ ಹಣ ಪಾವತಿಸುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆಸ್ಪತ್ರೆಗಳು ಒಂದು ಲಕ್ಷ ರೂಪಾಯಿ ಸರ್ಜರಿಗೆ ಎರಡು ಅಥವಾ ಮೂರು ಲಕ್ಷ ರೂಪಾಯಿ ಬಿಲ್ ಮಾಡುವ ಮೂಲಕ ಇನ್ಶೂರೆನ್ಸ್ ಇದ್ದರೂ ರೋಗಿಗಳಿಗೆ ಸಂಕಷ್ಟ ತಪ್ಪುತ್ತಿಲ್ಲ. ಒಂದು ಲಕ್ಷದ ಬಿಲ್​ಗೆ ಕೇವಲ 50 ಸಾವಿರ ರೂಪಾಯಿ ಮಾತ್ರ ಕ್ಲೈಮ್ ಆಗುವ ಉದಾಹರಣೆಗಳಿದ್ದು, ಉಳಿದ ಹಣವನ್ನು ರೋಗಿಗಳೇ ಭರಿಸಬೇಕಾಗಿದೆ. ಇನ್ಶೂರೆನ್ಸ್ ಕಂಪನಿಗಳು ಮತ್ತು ಆಸ್ಪತ್ರೆಗಳ ನಡುವಿನ ಈ “ಕಳ್ಳಾಟ”ದಿಂದಾಗಿ ಲಕ್ಷಾಂತರ ಹಣ ಕಟ್ಟಿ ಪ್ರೀಮಿಯಂ ಹೊಂದಿರುವ ರೋಗಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಈ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯಂತೆ ಇನ್ಶೂರೆನ್ಸ್ ಕಂಪನಿಗಳ ಜೊತೆ ಸಭೆ ನಡೆಸಲು ಮುಂದಾಗಿದ್ದು, ಈ ಅಕ್ರಮಗಳಿಗೆ ಬ್ರೇಕ್ ಹಾಕುವ ನಿರ್ಧಾರ ಮಾಡಿದೆ. ಇನ್ಶೂರೆನ್ಸ್ ಪಾಲಿಸಿ ಹೊಂದಿರುವ ರೋಗಿಗಳಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಲಭಿಸುವಂತೆ ಮಾಡುವುದು ಮತ್ತು ಆಸ್ಪತ್ರೆಗಳ ಅತಿಯಾದ ಬಿಲ್ಲಿಂಗ್ ತಡೆಯುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ. ಇದು ರೋಗಿಗಳಿಗೆ ವೈದ್ಯಕೀಯ ಬಿಲ್‌ಗಳ ಹೊರೆಯಿಂದ ಪರಿಹಾರ ನೀಡುವ ಭರವಸೆ ಮೂಡಿಸಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More