ಪೋಕ್ಸೋ ಕೇಸ್​: ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪಗೆ ಹೈಕೋರ್ಟ್ ಶಾಕ್​

Updated By: ಪ್ರಸನ್ನ ಹೆಗಡೆ

Updated on: Nov 13, 2025 | 5:58 PM

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಆಘಾತ ಎದುರಾಗಿದೆ. ಸಮನ್ಸ್ ರದ್ದುಪಡಿಸುವಂತೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಯಡಿಯೂರಪ್ಪ ಅವರು ವಿಚಾರಣೆಗೆ ಖುದ್ದು ಹಾಜರಾಗಬೇಕಿದ್ದು, ಅಗತ್ಯವಿಲ್ಲದಿದ್ದಾಗ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ಕೋರಬಹುದು ಎಂದು ನ್ಯಾಯಾಲಯ ಸೂಚಿಸಿದೆ.

ಬೆಂಗಳೂರು, ನವೆಂಬರ್​ 13: ಪೋಕ್ಸೋ ಕೇಸ್​ ವಿಚಾರವಾಗಿ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪಗೆ ಕೋರ್ಟ್​ ಶಾಕ್​ ಕೊಟ್ಟಿದೆ. ತ್ವರಿತ ನ್ಯಾಯಾಲಯದ ಸಮನ್ಸ್​ ರದ್ದುಪಡಿಸಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದ್ದು, ಈ ಬಗ್ಗೆ ನ್ಯಾ.ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಅಗತ್ಯವಿಲ್ಲದಿದ್ದಾಗ  ಹಾಜರಿಯಿಂದ ವಿನಾಯಿತಿಗೆ ಬಿಎಸ್​ವೈ ಖುದ್ದು ಅರ್ಜಿ ಸಲ್ಲಿಸಬಹುದು ಎಂದಿರುವ ಕೋರ್ಟ್,​ ಅಂತಹ ಮನವಿಯನ್ನು ಪರಿಗಣಿಸಲು ತ್ವರಿತ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಯಡಿಯೂರಪ್ಪ ವಿರುದ್ಧ ಫೆಬ್ರವರಿ 28ರಂದು ತ್ವರಿತ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 13, 2025 04:12 PM