ಅಪಹರಣ ಪ್ರಕರಣದಲ್ಲಿ ರೇವಣ್ಣ ಬಂಧನ, ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

|

Updated on: May 05, 2024 | 12:27 PM

ಹೆಚ್​ಡಿ ರೇವಣ್ಣ(HD Revanna) ಅವರನ್ನು ಬಂಧಿಸಿದ್ದು ಸಹಜವಾಗಿ ಜೆಡಿಎಸ್​ನವರಿಗೆ ಬೇಸರ ಆಗಿದೆ. ಆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಮುದೊಂದು ದಿನ ಎಸ್​ಐಟಿ ಮೇಲೂ ಆರೋಪ ಮಾಡಬಹುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಹೆಚ್​ಡಿ ರೇವಣ್ಣ(HD Revanna) ಅವರನ್ನು ಬಂಧಿಸಿದ್ದು ಸಹಜವಾಗಿ ಜೆಡಿಎಸ್​ನವರಿಗೆ ಬೇಸರ ಆಗಿದೆ. ಆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳದಿದ್ದರೆ ಮುದೊಂದು ದಿನ ಎಸ್​ಐಟಿ ಮೇಲೂ ಆರೋಪ ಮಾಡಬಹುದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಪ್ರಜ್ವಲ್​ ಬಗ್ಗೆ ಮಾತನಾಡಿದ ಪರಮೇಶ್ವರ್ ಈಗಾಗಲೇ ಬ್ಲ್ಯೂ ಕಾರ್ನರ್ ನೊಟೀಸ್ ಇಶ್ಯೂ ಮಾಡಿದ್ದಾರೆ. ಇಂಟರ್ ಪೋಲ್ ನವರು ಎಲ್ಲ ದೇಶಗಳಿಗೂ ಕಮ್ಯುನಿಕೇಟ್ ಮಾಡಿ ಲೊಕೇಟ್ ಮಾಡ್ತಾರೆ. ಬ್ಲ್ಯೂ ಕಾರ್ನರ್ ಅಂದ್ರೆ ಎಲ್ಲಿದ್ದಾರೆ ಅಂತ ಕಂಡುಹಿಡಿಯುತ್ತಾರೆ ಎಂದರು.

ಆಮೇಲೆ ಪ್ರಜ್ವಲ್ ರನ್ನು ಹೇಗೆ ಸೆಕ್ಯುರ್ ಮಾಡಿ ಕರೆತರಬೇಕು ಎಂಬ ಬಗ್ಗೆ ಎಸ್ಐಟಿ ನಿರ್ಧಾರ ಮಾಡುತ್ತದೆ. ಎಸ್​ಐಟಿ ದಿನನಿತ್ಯ ಏನು ಮಾಡುತ್ತೆ ಎಂದು ನಾನು ವಕ್ತಾರನಂತೆ ವರದಿ ಒಪ್ಪಿಸಲು ಸಾಧ್ಯವಿಲ್ಲ, ಎಸ್​ಐಟಿ ಅದರ ಕೆಲಸವನ್ನು ಮಾಡುತ್ತದೆ.
ದೂರು ಬಂದ ಬಳಿಕ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತಿದೆ. ರೇವಣ್ಣ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಪ್ರೊಡ್ಯೂಸ್​ ಮಾಡುತ್ತಾರೆ. ಮುಂದೆ ಏನೇನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಾರೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ