Karnataka Legislative Assembly Session Live: ವಿಧಾನಸಭೆ ಬಜೆಟ್ ಅಧಿವೇಶನದ ನೇರಪ್ರಸಾರ
ವಿಧಾನ ಸಬೆಯಲ್ಲಿ ನಡೆಯುತ್ತಿರುವ ಇಂದಿನ ಕಾರ್ಯಕಲಾಪಗಳ ನೇರ ಪ್ರಸಾರ
ಬೆಂಗಳೂರು: ರಾಜ್ಯ ವಿಧಾನಮಂಡಲ ಬಜೆಟ್ ಅಧಿವೇಶನ (Budget Session) ಮಂಗಳವಾರದ ಕಾರ್ಯಕಲಾಪಗಳು ಅರಂಭವಾಗಿವೆ. ಸೋಮವಾರ ಸದನದಲ್ಲಿ ಜೈನಮುನಿಯವರ ಹತ್ಯೆ ಪ್ರಕರಣದ ಬಗ್ಗೆಯೇ ದಿನವಿಡೀ ಚರ್ಚೆಯಾಯಿತು. ಹತ್ಯೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಖುದ್ದು ಗೃಹ ಸಚಿವ ಜಿ ಪರಮೇಶ್ವರ (G Parameshwara) ಸೋಮವಾರದಂದು ಹುಬ್ಬಳ್ಳಿ ಮತ್ತು ತಿಕೋಟಾಗೆ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು. ವಿವರಗಳನ್ನು ಇಂದು ಸದನದಲ್ಲಿ ಹೇಳಲಿದ್ದಾರೆ ಅಂತ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರ ಜೊತೆ ರಾಜ್ಯದ ಜನತೆ ಸಹ ಜೈನಮುನಿಗಳ ಹತ್ಯೆ ಬಗ್ಗೆ ತಿಳಿಯಲು ಕಾತುರವಾಗಿದೆ. ವಿಧಾನ ಸಬೆಯಲ್ಲಿ ನಡೆಯುತ್ತಿರುವ ಇಂದಿನ ಕಾರ್ಯಕಲಾಪಗಳ ನೇರ ಪ್ರಸಾರ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Published on: Jul 11, 2023 11:52 AM
Latest Videos