Floods in Himachal Pradesh: ಕುಲು-ಮನಾಲಿ ಪ್ರವಾಸಕ್ಕೆ ತೆರಳಿದ್ದ ಮೈಸೂರು ಕನ್ನಡಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ, ಆತಂಕದಲ್ಲಿ ಕುಟುಂಬಸ್ಥರು

Floods in Himachal Pradesh: ಕುಲು-ಮನಾಲಿ ಪ್ರವಾಸಕ್ಕೆ ತೆರಳಿದ್ದ ಮೈಸೂರು ಕನ್ನಡಿಗರು ಸಂಪರ್ಕಕ್ಕೆ ಸಿಗುತ್ತಿಲ್ಲ, ಆತಂಕದಲ್ಲಿ ಕುಟುಂಬಸ್ಥರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 11, 2023 | 10:43 AM

ರವಿವಾರದ ಬಳಿಕ ಅವರಿಂದ ಕರೆ, ಸಂದೇಶ ಎಂಥದ್ದೂ ಇಲ್ಲ ಎಂದು ಮೈಸೂರಲ್ಲಿರುವ ಕುಟುಂಬಸ್ಥರು ಆತಂಕದಿಂದ ಹೇಳುತ್ತಿದ್ದಾರೆ.

ಬೆಂಗಳೂರು: ಇದು ಬಹಳ ಕಳವಳಕಾರಿ ಸಂಗತಿ. ಮೈಸೂರಿಂದ ಹಿಮಾಚಲ ಪ್ರದೇಶದ (Himachal Pradesh) ಕುಲು, ಮನಾಲಿ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು (Kannadigas) ಕುಟುಂಬಸ್ಥರ ಸಂಪರ್ಕಕ್ಕೆ ಸಿಗುತ್ತಿಲ್ಲ. ಶ್ರೀನಿಧಿ, ನವ್ಯ, ವೀರ್ ಮತ್ತು ಅವರ ಪತ್ನಿ (ಹೆಸರು ಗೊತ್ತಾಗಿಲ್ಲ) ಕಳೆದ ಗುರುವಾರ ಪ್ರವಾಸಕ್ಕೆ ತೆರಳಿದ್ದು ರವಿವಾರ ರಾತ್ರಿ ಅವರು ಕೊನೆಯ ಬಾರಿ ಮಾತಾಡಿದ್ದಂತೆ. ಹಿಮಾಚಲ ಪ್ರದೇಶದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ಹಲವಾರು ಕಡೆ ಪ್ರವಾಹ (floods) ತಲೆದೋರಿದೆ. ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆ ಭಾನುವಾರವೇ ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಪ್ರವಾಸಕ್ಕೆ ತೆರಳಿದವರು ಅವತ್ತು ರಾತ್ರಿ ಸುರಕ್ಷಿತವಾಗಿದ್ದೇವೆ ಅಂತ ಮೆಸೇಜ್ ಕಳಿಸಿದ್ದರಂತೆ. ಅದಾದ ಬಳಿಕ ಅವರಿಂದ ಕರೆ, ಸಂದೇಶ ಎಂಥದ್ದೂ ಇಲ್ಲ ಎಂದು ಮೈಸೂರಲ್ಲಿರುವ ಕುಟುಂಬಸ್ಥರು ಆತಂಕದಿಂದ ಹೇಳುತ್ತಿದ್ದಾರೆ. ಅವರು ಆದಷ್ಟು ಬೇಗ ಸುರಕ್ಷಿತವಾಗಿ ವಾಪಸ್ಸು ಬರಲಿ ಅಂತ ಹಾರೈಸೋಣ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ