ಕಡೂರು ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟ
ಚಿಕ್ಕಮಗಳೂರು(Chikmagaluru) ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಅರೇ ನಗ್ನನಾಗಿದ್ದ ಅಬ್ರಾಡ್ ಪ್ರಜೆ, ಬರೀ ಮೈಯಲ್ಲಿ ಸೊಂಟಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ನಗರದಾದ್ಯಂತ ಓಡಾಟ ನಡೆಸಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಪೊಲೀಸರು ಹರಸಾಹಸ ನಡೆಸಿದ್ದು, ಬರೊಬ್ಬರಿ ಅರ್ಧ ಗಂಟೆ ಆತನ ಹಿಂದೆ ಓಡೋಡಿ ಹಿಡಿದಿದ್ದಾರೆ.
ಚಿಕ್ಕಮಗಳೂರು, ಮೇ.10: ಬಸ್ ನಿಲ್ದಾಣದಲ್ಲಿ ಅರೆನಗ್ನವಾಗಿ ವಿದೇಶಿ ಪ್ರಜೆ ಹುಚ್ಚಾಟವಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಚಿಕ್ಕಮಗಳೂರು(Chikmagaluru) ಜಿಲ್ಲೆಯ ಕಡೂರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಅರೇ ನಗ್ನನಾಗಿದ್ದ ಅಬ್ರಾಡ್ ಪ್ರಜೆ, ಬರೀ ಮೈಯಲ್ಲಿ ಸೊಂಟಕ್ಕೆ ಪ್ಲಾಸ್ಟಿಕ್ ಚೀಲ ಸುತ್ತಿಕೊಂಡು ನಗರದಾದ್ಯಂತ ಓಡಾಟ ನಡೆಸಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಪೊಲೀಸರು ಹರಸಾಹಸ ನಡೆಸಿದ್ದು, ಬರೊಬ್ಬರಿ ಅರ್ಧ ಗಂಟೆ ಆತನ ಹಿಂದೆ ಓಡೋಡಿ ಹಿಡಿದಿದ್ದಾರೆ. ಈ ಮೂಲಕ ಪರ್ಷಿಯನ್ ಪ್ರಜೆ, ಪೊಲೀಸರಿಗೆ ಸರ್ಕಾರಿ ಬಸ್ ನಿಲ್ದಾಣವನ್ನ 3 ಸುತ್ತು ಓಡಿಸಿದ್ದಾನೆ. ಇನ್ನು ಆತ ಪರ್ಷಿಯನ್ ಭಾಷೆ ಮಾತನಾಡುತ್ತಿದ್ದ. ಈ ಹಿನ್ನಲೆ ಆತನ ಭಾಷೆ ಅರ್ಥವಾಗದೆ, ಹೊಸ ಬಟ್ಟೆಯನ್ನು ಕೊಡಿಸಿ ಮತ್ತು ಊಟ ಮಾಡಿಸಿ ಕಡೂರಿಂದ ಬೆಂಗಳೂರು ರೈಲನ್ನು ಹತ್ತಿಸಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 10, 2024 03:50 PM