ಬಾಗಲಕೋಟೆಯ ಇಲಾಳ ಮೇಳದ ರಾಜಕೀಯ ಭವಿಷ್ಯ: ರಾಜನೇ ಮರಳಿ ರಾಜನಾಗುವ ಯೋಗ

Edited By: ವಿವೇಕ ಬಿರಾದಾರ

Updated on: Apr 09, 2024 | 1:06 PM

ಪ್ರತಿ ವರ್ಷ ಯುಗಾದಿ ಪಾಡ್ಯದಂದು ಬಾಗಲಕೋಟೆಯ ಗುಳೇದಗುಡ್ಡದ ಪಟ್ಟಣದ ಮಾರವಾಡಿ ಬಗೀಚ್​ದಲ್ಲಿ ನಡೆಯುವ ಇಲಾಳ ಮೇಳದ ರಾಜಕೀಯ ಭವಿಷ್ಯವಾಣಿ ನುಡಿಯಲಾಗುತ್ತದೆ. ಅದರಂತೆ ಈ ಬಾರಿಯೂ ರಾಜಕೀಯ ಭವಿಷ್ಯ ನುಡಿದಿದ್ದು, ರಾಜ ಬಲಿಷ್ಠ ಆಗಿದ್ದಾನೆ, ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಹೇಳಲಾಗಿದೆ.

ಬಾಗಲಕೋಟೆ, ಏಪ್ರಿಲ್​ 09: ರಾಜ ಬಲಿಷ್ಠ ಆಗಿದ್ದಾನೆ, ಹೀಗಾಗಿ ರಾಜನೇ ಮರಳಿ ರಾಜನಾಗುವ ಯೋಗ ಇದೆ ಎಂದು ಗುಳೇದಗುಡ್ಡದ (Guledgudda) ಪಟ್ಟಣದ ಮಾರವಾಡಿ ಬಗೀಚ್​ದಲ್ಲಿ ನಡೆಯುವ ಇಲಾಳ ಮೇಳದ ರಾಜಕೀಯ ಭವಿಷ್ಯವಾಣಿಯಾಗಿದೆ (Political Bhavishyavani) . ಪ್ರತಿ ವರ್ಷ ಯುಗಾದಿ (Ugadi) ಪಾಡ್ಯದಂದು ಇಲಾಳ ಮೇಳದ ಭವಿಷ್ಯ ನುಡಿಯಲಾಗುತ್ತಿದೆ. ಇಲ್ಲಿ, ರಾಜಕೀಯ, ಮಳೆ ಮತ್ತು ಬೆಳೆ ಸೇರಿದಂತೆ ಹಲವು ವಿಚಾರವಾಗಿ ಭವಿಷ್ಯ ನುಡಿಯಲಾಗುತ್ತದೆ. ಈ ಬಾರಿ ಮಲ್ಲಿಕಾರ್ಜುನ ಗೊಬ್ಬಿ ರಾಜಕೀಯ ಭವಿಷ್ಯ ನುಡಿದಿದ್ದು, “ಈಗ ಇರುವ ರಾಜನೇ ಮತ್ತೆ ರಾಜ ಆಗುತ್ತಾನೆ. ರಾಜ, ಪ್ರಜೆಗಳು, ಮಂತ್ರಿಗಳು, ಸೈನ್ಯ ಬಲಿಷ್ಠವಾಗಿವೆ. ಅಧಿಕಾರ ಬೇಕು ಬೇಕು, ನಾವು ಆಳಬೇಕು ಅಂತ ಹೆಣಗಾಡುತ್ತಾರೆ” ಎಂದು ರಾಜಕೀಯ ಭವಿಷ್ಯ ನುಡಿಯಲಾಗಿದೆ.

ಇನ್ನು ಕೃಷಿ ಭವಿಷ್ಯ ನಡಿಯಲಾಗಿದ್ದು, ಎಷ್ಟೇ ಕಷ್ಟ ಕಾರ್ಪಣ್ಯ ಬಂದರೂ ಜೀವನ ಆನಂದವಾಗಿ ಸಾಗುತ್ತೆ. ದೇವರ ಸ್ಮರಣೆ, ದಾನ ಧರ್ಮ ಮಾಡಬೇಕು. ಈ ವರ್ಷ ಹೆಸರು, ಬಿಳಿಜೋಳ, ಗೋಧಿ, ಕಡಲೆ ಬಂಪರ್ ಬೆಳೆ ಇದೆ. ತೊಗರಿ, ಸಜ್ಜಿಗೆ ಕೀಟಬಾಧೆ ಜಾಸ್ತಿ ಆಗುತ್ತದೆ. ಎಳ್ಳು ತೇಜಿ ಆಗುತ್ತೆ. ಗುಳೇದಗುಡ್ಡ ಖಣ ಹಾಗೂ ಖಣದ ಸೀರೆ, ಇಳಕಲ್ ಸೀರೆ ವ್ಯಾಪಾರ ಸ್ವಲ್ಪ ಕಡಿಮೆ ಆಗುತ್ತದೆ. ಬಟ್ಟೆ ವ್ಯಾಪಾರ ಚನ್ನಾಗಿ ಆಗುತ್ತೆ ಎಂದು ಭವಿಷ್ಯ ನುಡಿಯಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 09, 2024 01:04 PM
Loading...
Unable to load recommendations.
Follow Us
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More