ಮಂಡ್ಯಕ್ಕೆ ಬಂದ ರಾಹುಲ್ ಗಾಂಧಿ ಹೆಲಿಕಾಪ್ಟರ್ ಇಂಚಿಂಚೂ ಚೆಕ್ಕಿಂಗ್

|

Updated on: Apr 17, 2024 | 4:49 PM

ಲೋಕಸಭೆ ಚುನಾವಣಾ ಕಣ ರಂಗೇರಿದ್ದು, ಇಂದು(ಏ.17) ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಭಾಗದ ಕಾಂಗ್ರೆಸ್​ ನಾಯಕರನ್ನ ಬಲ ಪಡಿಸಲು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಹಿನ್ನಲೆ ಸಕ್ಕರೆ ನಗರಿ ಮಂಡ್ಯ ನಗರದ ಪಿಇಎಸ್ ಕಾಲೇಜು ಮೈದಾನದ ಹೆಲಿಪ್ಯಾಡ್​ಗೆ ರಾಹುಲ್​ ಗಾಂಧಿ(Rahul Gandhi) ಆಗಮಿಸಿದ್ದಾರೆ. ಈ ವೇಳೆ ಅವರು ಆಗಮಿಸಿದ ಹೆಲಿಕಾಪ್ಟರ್​ನ್ನು ಅಧಿಕಾರಿಗಳು ಇಂಚಿಂಚೂ ಪರಿಶೀಲಿಸಿದ್ದಾರೆ.

ಮಂಡ್ಯ, ಏ.17: ಲೋಕಸಭೆ ಚುನಾವಣಾ ಕಣ ರಂಗೇರಿದ್ದು, ಇಂದು(ಏ.17) ಮಂಡ್ಯ, ಹಾಸನ, ಚಾಮರಾಜನಗರ, ಮೈಸೂರು ಭಾಗದ ಕಾಂಗ್ರೆಸ್​ ನಾಯಕರನ್ನ ಬಲ ಪಡಿಸಲು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಈ ಹಿನ್ನಲೆ ಸಕ್ಕರೆ ನಗರಿ ಮಂಡ್ಯ ನಗರದ ಪಿಇಎಸ್ ಕಾಲೇಜು ಮೈದಾನದ ಹೆಲಿಪ್ಯಾಡ್​ಗೆ ರಾಹುಲ್​ ಗಾಂಧಿ(Rahul Gandhi) ಆಗಮಿಸಿದ್ದಾರೆ. ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿಯನ್ನ ಸೋಲಿಸಲೇ ಬೇಕೆಂದು ಪಣ ತೊಟ್ಟಿರುವ ಕೈ ನಾಯಕರು, ಅತಿ ಹೆಚ್ಚು ಒಕ್ಕಲಿಗ, ಅಹಿಂದ, ಹಾಗೂ ಮಹಿಳೆಯರನ್ನೆ ಟಾರ್ಗೆಟ್ ಮಾಡಿದೆ. ಈ ಹಿನ್ನಲೆ ಇಂದು ಸಮಾವೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆರನ್ನ ಕಾಂಗ್ರೆಸ್ ನಾಯಕರು ಕರೆ ತಂದಿದೆ. ಇನ್ನು ಈ ವೇಳೆ ರಾಹುಲ್​ ಗಾಂಧಿ ಆಗಮಿಸಿದ ಹೆಲಿಕಾಪ್ಟರ್​ನ್ನು ಅಧಿಕಾರಿಗಳು ಇಂಚಿಂಚೂ ಪರಿಶೀಲಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ