ಬಿಸಿಲ ಧಗೆಗೆ ಹೊರಬಂದ ಹಾವುಗಳು; ಒಂದೇ ದಿನ 12 ಸರ್ಪಗಳ ರಕ್ಷಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 10, 2024 | 2:43 PM

ಇನ್ನು ಇತ್ತೀಚೆಗಷ್ಟೇ ಹಾವು ಕಡಿತದ ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಂಗ್ರಹವು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಮಧ್ಯೆ ಬಿಸಿಲಿನ ತಾಪಮಾನಕ್ಕೆ ಹಾವುಗಳು ಹೊರಬರುತ್ತಿದ್ದು, ಜನರಿಗೆ ಮತ್ತೊಂದು ಆತಂಕ ಶುರುವಾಗಿದೆ. ಇಂದು(ಮೇ.10) ಒಂದೇ ದಿನ ತುಮಕೂರಿನಲ್ಲಿ(Tumkuru) ಮನೆ, ಬೈಕ್, ಕಾರು, ಸೇರಿದಂತೆ ಹಲವು ಕಡೆಗಳಲ್ಲಿ ಅವಿತಿದ್ದ  12 ಹಾವುಗಳನ್ನ ಉರಗ ಸಂರಕ್ಷಕ ದಿಲೀಪ್ ಹಾಗೂ ತುಮಕೂರಿನ ವರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತದಿಂದ ರಕ್ಷಿಸಿದ್ದಾರೆ. ಈ ಮೂಲಕ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಿಸಿಲಿನ ನಡುವೆ ಇದೀಗ ಜನರಲ್ಲಿ ಹಾವುಗಳ ಆತಂಕ ಕೂಡ ಮೂಡಿದೆ.

ತುಮಕೂರು, ಮೇ.10: ಬಿಸಿಲಿನ ತಾಪ ಹೆಚ್ಚಾಗಿ ಜನರು ಹೈರಾಣರಾಗಿದ್ದಾರೆ. ಮನೆಯಿಂದ ಹೊರಬರಲು ಕೂಡ ಹೆದರುವಂತಹ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ರಾಜ್ಯ ರಾಜಧಾನಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆಯ ಸಿಂಚನವಾಗುತ್ತಿದ್ದು, ಕೊಂಚ ಮಟ್ಟಿಗೆ ಸಿಲಿಕಾನ್​ ಸಿಟಿ ಮಂದಿ ನಿರಾಳರಾಗಿದ್ದಾರೆ. ಆದರೆ, ರಾಜ್ಯದಲ್ಲಿ ಬಿಸಿಲಿಗೆ ಜನರು ಅಕ್ಷರಶಃ ನಲುಗಿದ್ದಾರೆ. ಇದರ ನಡುವೆ ಹಾವುಗಳ ಕಾಟ ಕೂಡ ಹೆಚ್ಚಾಗಿದೆ. ಹೌದು, ಹಾವುಗಳು(Snakes) ಸಕೆ ತಾಳಲಾರದೇ ಹೊರಬರುತ್ತಿದ್ದು, ಇಂದು(ಮೇ.10) ಒಂದೇ ದಿನ ತುಮಕೂರಿನಲ್ಲಿ(Tumkuru) ಮನೆ, ಬೈಕ್, ಕಾರು, ಸೇರಿದಂತೆ ಹಲವು ಕಡೆಗಳಲ್ಲಿ ಅವಿತಿದ್ದ  12 ಹಾವುಗಳನ್ನ ಉರಗ ಸಂರಕ್ಷಕ ದಿಲೀಪ್ ಹಾಗೂ ತುಮಕೂರಿನ ವರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತದಿಂದ ರಕ್ಷಿಸಿದ್ದಾರೆ. ಈ ಮೂಲಕ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಿಸಿಲಿನ ನಡುವೆ ಇದೀಗ ಜನರಲ್ಲಿ ಹಾವುಗಳ ಆತಂಕ ಕೂಡ ಮೂಡಿದೆ.

ಇನ್ನು ಇತ್ತೀಚೆಗಷ್ಟೇ ಹಾವು ಕಡಿತದ ಚಿಕಿತ್ಸೆಗೆ ಅಗತ್ಯವಿರುವ ಔಷಧ ಸಂಗ್ರಹವು ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಕಳೆದ ನಾಲ್ಕು ವರ್ಷಗಳಿಗೆ ಹೋಲಿಕೆ ಮಾಡಿದರೇ, ಈ ವರ್ಷ ಹಾವು ಕಡಿತಗಳ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ, 2024 ಆರಂಭದಿಂದ ಇಲ್ಲಿಯವರೆಗೆ ಹಾವುಗಳ ಕಡಿತ್ತಕ್ಕೆ ಒಳಗಾದವರ ಸಂಖ್ಯೆ ಹೆಚ್ಚಿದೆ. ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 2316 ಜನರಿಗೆ ಹಾವು ಕಡಿದಿದ್ದು, 18 ಜನರು ಮೃತಪಟ್ಟಿದ್ದಾರೆ. ಮೂರು ವರ್ಷಗಳಲ್ಲಿ 13 ಸಾವಿರ ಜನರಿಗೆ ಹಾವು ಕಡಿದಿದ್ದು, ಈ ಪೈಕಿ 46 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2024 02:40 PM