ಬೆಂಗಳೂರಿನಲ್ಲಿ ನಿಲ್ಲದ ಪುಂಡರ ಅಟ್ಟಹಾಸ; ಹಾಡಹಗಲೇ ಮಚ್ಚು ಹಿಡಿದು ಹಪ್ತಾ ವಸೂಲಿ

Edited By: ಕಿರಣ್ ಹನುಮಂತ್​ ಮಾದಾರ್

Updated on: May 30, 2024 | 3:47 PM

: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಪುಂಡರ ಅಟ್ಟಹಾಸ ಮೀತಿಮೀರಿದೆ. ಎಷ್ಟೇ ಕಾನೂನು ಕ್ರಮಕೈಗೊಂಡರೂ ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ದುಷ್ಕರ್ಮಿಗಳು ಹಾಡಹಗಲೇ ಮಚ್ಚು ಹಿಡಿದು ಹಪ್ತಾ ವಸೂಲಿಗೆ ಇಳಿದಿದ್ದಾರೆ. ಪುಂಡನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೋರ್ವ ಸೆರೆಯಾದ ಸಿಸಿಟಿವಿ ದೃಶ್ಯವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾನೆ.

ಬೆಂಗಳೂರು, ಮೇ.30: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru) ಪುಂಡರ ಅಟ್ಟಹಾಸ ಮೀತಿಮೀರಿದೆ. ಎಷ್ಟೇ ಕಾನೂನು ಕ್ರಮಕೈಗೊಂಡರೂ ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ದುಷ್ಕರ್ಮಿಗಳು ಹಾಡಹಗಲೇ ಮಚ್ಚು ಹಿಡಿದು ಹಪ್ತಾ ವಸೂಲಿಗೆ ಇಳಿದಿದ್ದಾರೆ. ನಗರದ ಲಿಂಗರಾಜಪುರ ಬಳಿ ಇರುವ ಮೆಡಿಕಲ್ ಶಾಫ್​ನಲ್ಲಿ ನಡೆದಿದೆ ಎನ್ನಲಾದ ಘಟನೆಯಲ್ಲಿ ಸ್ವಲ್ಪ ಯಾಮಾರಿದ್ದರೂ ಶಾಪ್ ಓನರ್ ನೆತ್ತರು ಹರಿಯುತಿತ್ತು. ಪುಂಡನೊಬ್ಬ ಮೆಡಿಕಲ್ ಶಾಪ್​ಗೆ ದಿಢೀರ್​ ಬಂದವನೇ ಅಂಗಡಿ ಮಾಲೀಕನ ಮೇಲೆ ಮಚ್ಚು ಬೀಸಿದ್ದಾನೆ.

ಪುಂಡನೊಬ್ಬನ ಅಟ್ಟಹಾಸಕ್ಕೆ ನಲುಗಿದ ಶಾಪ್ ಮಾಲೀಕ

ಹಣ ಕೊಡದಿದ್ದಾಗ ಮೆಡಿಕಲ್ ಶಾಪ್ ಮುಂಭಾಗದ ಶೋ ಕೇಸ್ ಗ್ಲಾಸ್ ಒಡೆದು, ಅಂಗಡಿ ಮಾಲೀಕನ ಮೇಲೇಯೇ ಮಚ್ಚು ಬೀಸಿದ್ದಾನೆ. ಪುಂಡನ ಅಟ್ಟಹಾಸಕ್ಕೆ ಬೆದರಿದ ಶಾಪ್​ ಮಾಲೀಕನಿಂದ ಹಣ ವಸೂಲಿ ಮಾಡಿದ್ದಾನೆ. ಇದೇ ವೇಳೆ ಬಂದ ಗ್ರಾಹಕ ಮಚ್ಚು ನೋಡಿದ ಕೂಡಲೇ ಪರಾರಿಯಾಗಿದ್ದಾನೆ. ಪುಂಡನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಕ್ತಿಯೋರ್ವ ಸೆರೆಯಾದ ಸಿಸಿಟಿವಿ ದೃಶ್ಯವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More